ಕೇಸರಿ ಬಟ್ಟೆ ಧರಿಸಿದವರು ದೇವಾಲಯಗಳ ಒಳಗೆ ಅತ್ಯಾಚಾರ ಎಸೆಗುತ್ತಾರೆ: ದಿಗ್ವಿಜಯ್ ಸಿಂಗ್

Update: 2019-09-17 14:34 GMT

ಭೋಪಾಲ,ಸೆ.17: ಕೇಸರಿ ಬಟ್ಟೆ ಧರಿಸಿದ ಜನರು ದೇವಾಲಯಗಳ ಒಳಗೆ ಚೂರ್ಣಗಳನ್ನು ಮಾರುತ್ತಾರೆ ಮತ್ತು ಅತ್ಯಾಚಾರ ಎಸಗುತ್ತಾರೆ ಎಂದು ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್ ನಾಯಕ ಮತ್ತು ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಮಂಗಳವಾರ ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ. ಮಧ್ಯ ಪ್ರದೇಶ ಆಧ್ಯಾತ್ಮಿಕ ವಿಭಾಗ ಆಯೋಜಿಸಿದ್ದ ಸಂತ ಸಮಾಗಮ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ಅವರು ಈ ಹೇಳಿಕೆಯನ್ನು ನೀಡಿದ್ದಾರೆ. ಪ್ರಾಚೀನ ಸನಾತನ ಧರ್ಮಕ್ಕೆ ಅವಮಾನ ಮಾಡಿದವರನ್ನು ದೇವರೂ ಕ್ಷಮಿಸುವುದಿಲ್ಲ. ಕೇಸರಿ ಬಟ್ಟೆ ಧರಿಸಿದ ಜನರು ದೇವಾಲಯಗಳ ಒಳಗೆ ಚೂರ್ಣಗಳನ್ನು ಮಾರುತ್ತಾರೆ ಮತ್ತು ಅತ್ಯಾಚಾರ ಎಸಗುತ್ತಾರೆ ಎಂದು ಸಿಂಗ್ ಕಿಡಿಕಾರಿದ್ದಾರೆ. ರಾಜಕೀಯ ಹಿತಾಸಕ್ತಿಗಾಗಿ ಕೆಲವರು ಜೈ ಶ್ರೀರಾಮ ಎಂಬ ಘೋಷವಾಕ್ಯವನ್ನು ಅಪಹರಿಸಿದ್ದಾರೆ ಎಂದು ಸಿಂಗ್ ಈ ವೇಳೆ ಆರೋಪಿಸಿದ್ದಾರೆ. ಈ ಘೋಷವಾಕ್ಯ ಜೈ ಶ್ರೀರಾಮ ಎಂದು ಆಗಬೇಕು. ನಾವು ರಾಮನ ಹೆಸರಿನ ಘೋಷಣೆ ಕೂಗುವಾಗ ಸೀತೆಯನ್ನು ಯಾಕೆ ಮರೆಯುತ್ತೇವೆ ಎಂದು ಸಿಂಗ್ ಪ್ರಶ್ನಿಸಿದ್ದಾರೆ. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕಂಪ್ಯೂಟರ್ ಬಾಬಾ, ದೇವಾಲಯಗಳಿಗೆ ಉಚಿತ ವಿದ್ಯುತ್ ನೀಡಬೇಕು ಮತ್ತು ಸಾಧು ಸಂತರಿಗೆ ವೃದ್ಧಾಪ್ಯ ವೇತನ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಸರಕಾರಿ ಜಮೀನಿನಲ್ಲಿ ಮಂದಿರಗಳನ್ನು ನಿರ್ಮಿಸಿ ಅದನ್ನು ನಿರ್ವಹಿಸುತ್ತಿರುವವರಿಗೆ ಆ ಜಮೀನಿನ ಮಾಲಕತ್ವ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ಕಮಲ್‌ನಾಥ್, ನಾವು ಕೈಗಾರಿಕೋದ್ಯಮಿಗಳಿಗೆ, ವ್ಯಾಪಾರಿಗಳಿಗೆ ಜಮೀನು ನೀಡುತ್ತೇವೆ, ಸಾಧುಗಳಿಗೆ ಕೊಡದೆ ಇರಲು ಸಾಧ್ಯವೇ? ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News