ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್: ಅಮಿತ್ ಕ್ವಾರ್ಟರ್ ಫೈನಲ್‌ಗೆ

Update: 2019-09-17 17:52 GMT

ಎಕಟೆರಿನ್‌ಬರ್ಗ್(ರಶ್ಯ), ಸೆ.17: ಏಶ್ಯನ್ ಗೇಮ್ಸ್ ಚಾಂಪಿಯನ್ ಅಮಿತ್ ಪಾಂಘಾಲ್(52ಕೆಜಿ) ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ. ಈ ಮೂಲಕ ಚೊಚ್ಚಲ ಚಾಂಪಿಯನ್‌ಶಿಪ್ ಗೆಲ್ಲುವತ್ತ ಹೆಜ್ಜೆ ಇಟ್ಟಿದ್ದಾರೆ.

ಇಲ್ಲಿ ಮಂಗಳವಾರ ನಡೆದ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ದ್ವಿತೀಯ ಶ್ರೇಯಾಂಕದ ಅಮಿತ್ ಟರ್ಕಿಯ ಬಟುಹಾನ್ ಸಿಟ್‌ಸಿ ವಿರುದ್ಧ 5-0 ಅಂತರದಿಂದ ಜಯ ಸಾಧಿಸಿದರು.

ಹಾಲಿ ಏಶ್ಯ ಚಾಂಪಿಯನ್ ಅಮಿತ್ ಮುಂದಿನ ಸುತ್ತಿನಲ್ಲಿ ಫಿಲಿಪಿನೊ ಕಾರ್ಲೊ ಪಾಲಮ್‌ರನ್ನು ಎದುರಿಸಲಿದ್ದಾರೆ. ಪಾಲಂ ಕಳೆದ ವರ್ಷ ಜಕಾರ್ತದಲ್ಲಿ ನಡೆದ ಏಶ್ಯನ್ ಗೇಮ್ಸ್ ಸೆಮಿ ಫೈನಲ್‌ನಲ್ಲಿ ಅಮಿತ್‌ಗೆ ಶರಣಾಗಿದ್ದರು. ಮತ್ತೊಂದು ಪ್ರಿ-ಕ್ವಾರ್ಟರ್ ಫೈನಲ್‌ಫೈಟ್‌ನಲ್ಲಿ ಪಾಲಂ ಕೊರಿಯಾದ ಜೋ ಸೆಹಿಯೊಂಗ್ ರನ್ನು ಒಮ್ಮತದ ತೀರ್ಪಿನಲ್ಲಿ ಸೋಲಿಸಿದರು. ಬಲ್ಗೇರಿಯದಲ್ಲಿ ನಡೆದ ಪ್ರತಿಷ್ಠಿತ ಸ್ಟ್ರಾಂಡ್ಜಾ ಸ್ಮಾರಕ ಬಾಕ್ಸಿಂಗ್ ಟೂರ್ನಿಯಲ್ಲಿ ಅಮಿತ್ ಪಾಂಘಾಲ್ ಎರಡು ಬಾರಿ ಚಿನ್ನದ ಪದಕ ಜಯಿಸಿದ್ದರು. 2017ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕ್ವಾರ್ಟರ್ ಫೈನಲ್‌ಗೆ ಸೋತಿದ್ದ ಅಮಿತ್ ಈ ಬಾರಿ ಪದಕದ ನಿರೀಕ್ಷೆಯಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News