ಜೈಲಿಗೆ ಹೋದವರು ನನ್ನನ್ನು ಪ್ರಶ್ನಿಸಬಾರದು: ಅಮಿತ್ ಶಾಗೆ ಶರದ್ ಪವಾರ್ ತಿರುಗೇಟು

Update: 2019-09-18 06:48 GMT

ಸೊಲಾಪುರ, (ಮಹಾರಾಷ್ಟ್ರ), ಸೆ.18: ಜೈಲಿಗೆ ಹೋಗಿ ಬಂದಿರುವವರು ನನ್ನ ಸಾಧನೆಗಳನ್ನು ಪ್ರಶ್ನಿಸಬಾರದು ಎಂದು ಎನ್ ಸಿಪಿ ಅಧ್ಯಕ್ಷ ಶರದ್ ಪವಾರ್ ಅವರು ಮಂಗಳವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ತಿರುಗೇಟು ನೀಡಿದ್ದಾರೆ. 

ಬಿಜೆಪಿ ಅಧ್ಯಕ್ಷರಾದ ಅಮಿತ್ ಶಾ ಅವರನ್ನು 2010 ರಲ್ಲಿ ಸಿಬಿಐ ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್ಕೌಂಟರ್ ಆರೋಪ ಪ್ರಕರಣದಲ್ಲಿ ಬಂಧಿಸಿತ್ತು. ನಂತರ ಅವರು ಪ್ರಕರಣದಿಂದ ದೋಷಮುಕ್ತಗೊಂಡಿದ್ದರು.

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಮುನ್ನ ಸೋಲಾಪುರದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಎನ್ಸಿಪಿ ಮುಖ್ಯಸ್ಥ ಅವರು ಬಿಜೆಪಿಯ ಒಬ್ಬ ನಾಯಕ ಶರದ್ ಪವಾರ್ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ. "ನಾನು ಒಂದು ವಿಷಯ ಹೇಳಲು ಬಯಸುತ್ತೇನೆ, ಶರದ್ ಪವಾರ್ ಮಾಡಿರುವ  ಯಾವುದೇ ಒಳ್ಳೆಯ ಅಥವಾ ಕೆಟ್ಟ ಕೆಲಸಗಳಿಗೆ ಎಂದಿಗೂ ಜೈಲಿಗೆ ಹೋಗಿಲ್ಲ. ತಿಂಗಳುಗಟ್ಟಲೆ ಜೈಲಿನಲ್ಲಿದ್ದವರು ನಾನು ಏನು ಮಾಡಿದ್ದೇನೆ ಎಂದು ಕೇಳುತ್ತಿದ್ದಾರೆ " ಎಂದು ಲೇವಡಿ ಮಾಡಿದರು. 

"ಕೇಂದ್ರ ಕೃಷಿ ಸಚಿವರಾಗಿದ್ದಾಗ ನಾನು ರೈತರಿಗೆ 75,000 ಕೋಟಿ ರೂ.ಗಳ ಸಾಲ ಮನ್ನಾವನ್ನು ಮಂಜೂರು ಮಾಡಿದ್ದೇನೆ "ಎಂದು ಪವಾರ್ ಹೇಳಿದರು.

ಈ ತಿಂಗಳ ಆರಂಭದಲ್ಲಿ ಸೋಲಾಪುರದಲ್ಲಿ ನಡೆದ ರ್ಯಾಲಿಯಲ್ಲಿ ಅಮಿತ್ ಶಾ ಅವರು ಪವಾರ್ ಅವರನ್ನು ಗುರಿಯಾಗಿಸಿಕೊಂಡು ಮಹಾರಾಷ್ಟ್ರಕ್ಕೆ ಪವಾರ್ ಏನು ಕೊಡುಗೆ ನೀಡಿದ್ದಾರೆ ಎಂದು ಪ್ರಶ್ನಿಸಿದ್ದರು. .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News