ವಿಶ್ವಸಂಸ್ಥೆ ಸಭೆಯಲ್ಲಿ ಭಾರತ ಕಾಶ್ಮೀರದ ಕುರಿತು ಚರ್ಚಿಸದು: ಎಂಇಎ

Update: 2019-09-19 17:19 GMT

ಹೊಸದಿಲ್ಲಿ, ಸೆ. 19: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತ ಕಾಶ್ಮೀರ ವಿಷಯದ ಕುರಿತು ಚರ್ಚೆ ನಡೆಸದು. ಬದಲಾಗಿ ವಿಶ್ವಸಂಸ್ಥೆಯ ಜವಾಬ್ದಾರಿಯುತ ಸದಸ್ಯನಾಗಿ ಅಭಿವೃದ್ಧಿ, ಶಾಂತಿ ಹಾಗೂ ಭದ್ರತೆಗೆ ಭಾರತದ ಕೊಡುಗೆ ಬಗ್ಗೆ ಚರ್ಚೆ ನಡೆಸಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಗುರುವಾರ ಹೇಳಿದೆ.

ಪಾಕಿಸ್ತಾನ ಕಾಶ್ಮೀರದ ಬಗ್ಗೆ ಚರ್ಚೆ ನಡೆಸಲು ಬಯಸಿದರೆ, ಹಾಗೇ ಮಾಡಲಿ. ಆದರೆ, ನಮ್ಮ ಪ್ರಧಾನಿ ಭದ್ರತೆ, ಶಾಂತಿಗೆ ಭಾರತ ಏನು ಮಾಡಿದೆ ಎಂದು ಹಾಗೂ ಇತರ ದೇಶಗಳಿಂದ ನಮ್ಮ ನಿರೀಕ್ಷೆಗಳು ಏನು ಎಂಬುದನ್ನು ಚರ್ಚಿಸಲಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ತಿಳಿಸಿದ್ದಾರೆ.

ನಾವು ಹಲವು ಬಹುಪಕ್ಷೀಯ ವಿಷಯಗಳನ್ನು ಚರ್ಚಿಸಲಿದ್ದೇವೆ. ಅದರಲ್ಲಿ ಭಯೋತ್ಪಾದನೆ ಒಂದು. ಆದುದರಿಂದ ಕಾಶ್ಮೀರದ ಬಗ್ಗೆ ಗಮನ ಹರಿಸಲಾರೆವು ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News