‘ಹೌಡೀ ಮೋದಿ’ಯಲ್ಲಿ ದೊಡ್ಡ ಘೋಷಣೆಯ ಸಾಧ್ಯತೆ: ಡೊನಾಲ್ಡ್ ಟ್ರಂಪ್ ಇಂಗಿತ

Update: 2019-09-19 17:44 GMT

ವಾಶಿಂಗ್ಟನ್, ಸೆ. 19: ಅಮೆರಿಕದ ಹ್ಯೂಸ್ಟನ್‌ನಲ್ಲಿ ರವಿವಾರ ನಡೆಯಲಿರುವ ‘ಹೌಡೀ ಮೋದಿ’ ಕಾರ್ಯಕ್ರಮದಲ್ಲಿ ನಾನು ದೊಡ್ಡ ಘೋಷಣೆಯೊಂದನ್ನು ಮಾಡುವ ಸಾಧ್ಯತೆಯಿದೆ ಎಂಬ ಸೂಚನೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದಾರೆ.

‘ಹೌಡೀ ಮೋದಿ’ ಕಾರ್ಯಕ್ರಮದಲ್ಲಿ 50,000ಕ್ಕೂ ಅಧಿಕ ಭಾರತೀಯ ಸಮುದಾಯದ ಸದಸ್ಯರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ಕೂಡ ಭಾಗವಹಿಸಲಿದ್ದಾರೆ.

ಬುಧವಾರ ಕ್ಯಾಲಿಫೋರ್ನಿಯದಿಂದ ವಾಶಿಂಗ್ಟನ್ ಡಿಸಿಗೆ ವಾಪಸ್ ಬರುತ್ತಿದ್ದ ವೇಳೆ ಏರ್‌ಫೋರ್ಸ್ ವನ್ ವಿಮಾನದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡುತ್ತಿದ್ದರು. ‘‘ಇರಬಹುದು. ಪ್ರಧಾನಿ ಮೋದಿಯೊಂದಿಗೆ ನಾನು ಅತ್ಯುತ್ತಮ ಸಂಬಂಧವನ್ನು ಹೊಂದಿದ್ದೇನೆ’’ ಎಂದು ಟ್ರಂಪ್ ಹೇಳಿದರು.

ಮೋದಿಯ ರ್ಯಾಲಿಯಲ್ಲಿ ನಿಮ್ಮಿಂದ ಏನಾದರೂ ಘೋಷಣೆಯಿದೆಯೇ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಈ ರೀತಿಯಾಗಿ ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News