ಪ್ರಾಚೀನ ಅರಮನೆಯನ್ನೇ ದೋಚಿದ ದರೋಡೆಕೋರರು
Update: 2019-09-19 23:16 IST
ಪ್ಯಾರಿಸ್, ಸೆ. 19: ಫ್ರಾನ್ಸ್‌ನ 17ನೇ ಶತಮಾನದ ಭವ್ಯ ಅರಮನೆಯೊಂದನ್ನು ದರೋಡೆಕೋರರು ಗುರುವಾರ ಕೊಳ್ಳೆಹೊಡೆದಿದ್ದಾರೆ. ಕೋಟೆಯ ಮಾಲೀಕರನ್ನು ಕಟ್ಟಿ ಹಾಕಿದ ದುಷ್ಕರ್ಮಿಗಳು ಪ್ರಾಚೀನ ಕೋಟೆಯ ಅಮೂಲ್ಯ ವಸ್ತುಗಳನ್ನು ಕೆಡವಿ ಸುಮಾರು ಎರಡು ಮಿಲಿಯ ಯುರೋ (ಸುಮಾರು 16 ಕೋಟಿ ರೂಪಾಯಿ) ಮೌಲ್ಯದ ವಸ್ತುಗಳೊಂದಿಗೆ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ಯಾರಿಸ್‌ನಿಂದ ಸುಮಾರು 50 ಕಿಲೋಮೀಟರ್ ದೂರದಲ್ಲಿರುವ ಭವ್ಯ ವಾಕ್ಸ್-ಲೆ-ವಿಕೋಮ್ಟೆ ಅರಮನೆಯ ಒಡೆತನವನ್ನು 1875ರಿಂದ ಒಂದೇ ಕುಟುಂಬ ಹೊಂದಿದೆ.
ಈ ಅರಮನೆಯನ್ನು ಫ್ರಾನ್ಸ್ ದೊರೆ 14ನೇ ಲೂಯಿಸ್‌ರ ಹಣಕಾಸು ಸಚಿವ ನಿಕೊಲಸ್ ಫೋಕೆಟ್ 1661ರಲ್ಲಿ ನಿರ್ಮಿಸಿದ್ದರು.