ಪ್ರತಿ 11 ಸೆಕೆಂಡ್‌ಗಳಲ್ಲಿ ಬಾಣಂತಿ ಅಥವಾ ಶಿಶು ಸಾವು: ವಿಶ್ವಸಂಸ್ಥೆ

Update: 2019-09-19 17:49 GMT

 ಜಿನೀವ, ಸೆ. 19: ಹೆರಿಗೆಯ ಸಂದರ್ಭದಲ್ಲಿ ಸಂಭವಿಸುವ ಶಿಶು ಮತ್ತು ತಾಯಂದಿರ ಸಾವಿನ ಜಾಗತಿಕ ಸಂಖ್ಯೆಯಲ್ಲಿ ಇತ್ತೀಚಿನ ದಶಕಗಳಲ್ಲಿ ಭಾರೀ ಕಡಿತವಾಗಿದೆ. ಆದರೆ, ಗುರುವಾರ ಬಿಡುಗಡೆ ಮಾಡಲಾದ ವಿಶ್ವಸಂಸ್ಥೆಯ ನೂತನ ಅಂಕಿಅಂಶಗಳ ಪ್ರಕಾರ, ಇದರಲ್ಲಿ ಅಸಮಾನ ಪ್ರಗತಿಯಾಗಿದೆ.

ಒಂದು ನಿಮಿಷದಲ್ಲಿ ಸಂಭವಿಸುವ 5 ಹೆರಿಗೆಗಳ ಪೈಕಿ ಒಂದರಲ್ಲಿ ದುರಂತ ಸಂಭವಿಸುತ್ತದೆ.

ಪ್ರತಿ ವರ್ಷ ಸಂಭವಿಸುವ ಎಳೆಯ ಮಕ್ಕಳು ಮತ್ತು ಬಾಣಂತಿಯರ ಸಾವಿನ ಸಂಖ್ಯೆಯಲ್ಲಿ ಕಡಿಮೆಯಾಗಿದೆ ಎಂದು ವಿಶ್ವಸಂಸ್ಥೆಯ ವಿವಿಧ ಘಟಕಗಳ ಎರಡು ವರದಿಗಳು ಹೇಳಿವೆ. ಕೈಗೆಟಕುವ, ಗುಣಮಟ್ಟದ ಆರೋಗ್ಯ ಸೇವೆಗಳನ್ನು ಪಡೆಯಲು ಜನರಿಗೆ ಸಾಧ್ಯವಾಗುತ್ತಿರುವುದು ಇದಕ್ಕೆ ಕಾರಣ ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News