ಶರತ್ ಕಮಲ್, ಸತ್ಯನ್ ಕ್ವಾರ್ಟರ್ ಫೈನಲ್‌ಗೆ ಲಗ್ಗೆ

Update: 2019-09-19 18:06 GMT

ಯೊಗ್ಯಕರ್ತ(ಇಂಡೋನೇಶ್ಯ), ಸೆ.19: ಭಾರತದ ಪುರುಷರ ಡಬಲ್ಸ್ ಜೋಡಿ ಜಿ.ಸತ್ಯನ್ ಹಾಗೂ ಅಚಂತಾ ಶರತ್ ಕಮಲ್ ಗುರುವಾರ ನಡೆದ 24ನೇ ಆವೃತ್ತಿಯ ಐಟಿಟಿಎಫ್ ಏಶ್ಯನ್ ಟೇಬಲ್ ಟೆನಿಸ್ ಚಾಂಪಿಯನ್‌ಶಿಪ್‌ನಲ್ಲಿ ಬಹರೈನ್‌ನ ಮಹ್‌ಫೂಝ್ ಸೈಯದ್ ಮುರ್ತಝ ಹಾಗೂ ರಶೀದ್‌ರನ್ನು ಸೋಲಿಸಿ ಕ್ವಾರ್ಟರ್ ಫೈನಲ್ ತಲುಪಿದರು.

 ಏಕಪಕ್ಷೀಯವಾಗಿ ಸಾಗಿದ ಪಂದ್ಯದಲ್ಲಿ ಭಾರತದ ಜೋಡಿ ಕಮಲ್-ಸತ್ಯನ್, ಮುರ್ತಝ ಹಾಗೂ ರಶೀದ್‌ರನ್ನು 11-8, 11-6, 11-3 ಅಂತರದಿಂದ ಮಣಿಸಿತು. ಕಮಲ್-ಸತ್ಯನ್ ಕ್ವಾರ್ಟರ್‌ಫೈನಲ್‌ನಲ್ಲಿ ಚೀನಾದ ಜೋಡಿ ಲಿಯಾಂಗ್ ಜಿಂಗ್‌ಕನ್ ಹಾಗೂ ಲಿನ್ ಗಾವೊಯಾನ್‌ರನ್ನು ಎದುರಿಸಲಿದ್ದಾರೆ.

ಇದಕ್ಕೂ ಮೊದಲು ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದ ಭಾರತದ ಜೋಡಿ 32ರ ಸುತ್ತಿನ ಪಂದ್ಯದಲ್ಲಿ ಜೋರ್ಡನ್‌ನ ಅಬು ಯಮನ್ ಝೈದ್ ಹಾಗೂ ಝೈದ್‌ರನ್ನು 11-4, 11-7, 11-7 ಅಂತರದಿಂದ ಮಣಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News