ಎಚ್‌ಸಿಎ ಅಧ್ಯಕ್ಷ ಹುದ್ದೆಗೆ ಅಝರುದ್ದೀನ್ ನಾಮಪತ್ರ ಸಲ್ಲಿಕೆ

Update: 2019-09-19 18:14 GMT

ಹೈದರಾಬಾದ್, ಸೆ.19: ಭಾರತದ ಮಾಜಿ ನಾಯಕ ಮುಹಮ್ಮದ್ ಅಝರುದ್ದೀನ್ ಹೈದರಾಬಾದ್ ಕ್ರಿಕೆಟ್ ಅಸೋಯೇಶನ್‌ನ(ಎಚ್‌ಸಿಎ)ಅಧ್ಯಕ್ಷ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದಾರೆ. ಎಚ್‌ಸಿಎ ಚುನಾವಣೆ ಸೆ.27ರಂದು ನಿಗದಿಯಾಗಿದೆ.

ಎರಡು ವರ್ಷಗಳ ಹಿಂದೆ ಅಝರುದ್ದೀನ್ ಸಲ್ಲಿಸಿದ್ದ ನಾಮಪತ್ರವನ್ನು ತಿರಸ್ಕರಿಸಲಾಗಿತ್ತು. ಇದೀಗ ಎರಡನೇ ಬಾರಿ ಬುಧವಾರ ಮಾಜಿ ಮುಖ್ಯ ಚುನಾವಣಾ ಆಯುಕ್ತ ವಿ.ಎಸ್.ಸಂಪತ್‌ಗೆ ನಾಮಪತ್ರ ಸಲ್ಲಿಸಿದ್ದಾರೆ.

‘‘ನಾನು ಪ್ರತಿಯೊಬ್ಬರ ಸಲಹೆ ಸೂಚನೆಯನ್ನು ಪಡೆದು ಕ್ರಿಕೆಟ್‌ಗೆ ಬೆಳವಣಿಗೆಗೆ ಶ್ರಮಿಸುವೆ. ಕ್ರಿಕೆಟ್ ಬೆಳವಣಿಗೆಗೆ ಏನಾದರೂ ನೀಡಬೇಕೆಂದು ಬಯಸಿದ್ದೇನೆ’’ ಎಂದು ಪಿಟಿಐ ಸುದ್ದಿಸಂಸ್ಥೆಗೆ ಅಝರುದ್ದೀನ್ ತಿಳಿಸಿದ್ದಾರೆ.

ಮಾಜಿ ಕ್ರಿಕೆಟ್ ಆಡಳಿತಾಧಿಕಾರಿ ಪಿ.ಆರ್.ಮಾನ್ ಸಿಂಗ್ ಪುತ್ರ ವಿಕ್ರಮ್ ಮಾನ್ ಸಿಂಗ್ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News