×
Ad

ಅಯೋಧ್ಯೆ ಪ್ರಕರಣ: ಹೆಚ್ಚುವರಿ 1 ಗಂಟೆ ವಿಚಾರಣೆ ನಡೆಸಲು ಸುಪ್ರೀಂ ನಿರ್ಧಾರ

Update: 2019-09-20 21:03 IST

ಹೊಸದಿಲ್ಲಿ, ಸೆ. 20: ಅಕ್ಟೋಬರ್ 18ರ ಗಡುವಿಗಿಂತ ಮುನ್ನ ಪೂರ್ಣಗೊಳಿಸಲು ರಾಮಜನ್ಮಭೂಮಿ-ಬಾಬರಿ ಮಸೀದಿ ಒಡೆತನ ವಿವಾದ ಪ್ರಕರಣದ ವಿಚಾರಣೆ ಸೋಮವಾರ ಆರಂಭವಾಗಲಿದ್ದು, ಈ ಸಂದರ್ಭ ಹೆಚ್ಚುವರಿ ಸಮಯಾವಕಾಶ ತೆಗೆದುಕೊಳ್ಳಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರ್ಧರಿಸಿದೆ.

 ದಶಕಗಳಷ್ಟು ಹಳೆಯ ರಾಜಕೀಯ ಸೂಕ್ಷ್ಮದ ಹಾಗೂ ಭೂವಿವಾದ ಪ್ರಕರಣವನ್ನು 28ನೇ ದಿನವಾದ ಇಂದು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಐವರು ಸದಸ್ಯರ ಪೀಠ, ಪ್ರತಿ ದಿನ ವಿಚಾರಣೆಯನ್ನು ಸಂಜೆ 4 ಗಂಟೆ ಬದಲಾಗಿ 5 ಗಂಟೆ ವರೆಗೆ ನಡೆಸಲು ನಿರ್ಧರಿಸಿದೆ ಎಂದು ಹಿಂದೂ ಹಾಗೂ ಮುಸ್ಲಿಂ ಕಕ್ಷಿದಾರರ ಪರ ವಕೀಲರಿಗೆ ತಿಳಿಸಿತು.

‘‘ನಾವು ಸೋಮವಾರ ಹೆಚ್ಚುವರಿ 1 ಗಂಟೆ ಕಾಲ ವಿಚಾರಣೆ ನಡೆಸಲಿದ್ದೇವೆ’’ ಎಂದು ನ್ಯಾಯಮೂರ್ತಿಗಳಾದ ಎಸ್.ಎ. ಬೊಬ್ಡೆ, ಡಿ.ವೈ. ಚಂದ್ರಚೂಡ, ಅಶೋಕ್ ಭೂಷಣ್ ಹಾಗೂ ಎಸ್.ಎ. ನಝೀರ್ ಅವರನ್ನು ಕೂಡ ಒಳಗೊಂಡ ಪೀಠ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News