ವಿಶ್ವ ಕುಸ್ತಿ ಚಾಂಪಿಯನ್‌ಶಿಪ್: ಬಜರಂಗ್, ರವಿಗೆ ಒಲಿದ ಕಂಚು

Update: 2019-09-20 17:17 GMT

 ನೂರ್‌ಸುಲ್ತಾನ್, ಸೆ.20: ವಿವಾದಾತ್ಮಕ ಸನ್ನಿವೇಶದಲ್ಲಿ ಸೆಮಿ ಫೈನಲ್ ಪಂದ್ಯವನ್ನು ಸೋತಿದ್ದ ವಿಶ್ವದ ನಂ.1 ಕುಸ್ತಿಪಟು ಬಜರಂಗ್ ಪೂನಿಯಾ ಮಂಗೋಲಿಯದ ಟುಲ್ಲಾ ಟುಮುರ್ ಒಚಿರ್ ವಿರುದ್ಧ ಶುಕ್ರವಾರ ಪ್ರಬಲ ಹೋರಾಟ ನಡೆಸಿ ವಿಶ್ವ ಚಾಂಪಿಯನ್‌ಶಿಪ್‌ನ 65 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದರು.

ಭಾರತದ ಇನ್ನೋರ್ವ ಕುಸ್ತಿಪಟು ರವಿ ದಾಹಿಯಾ ತಾನಾಡಿದ ಮೊದಲ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಏಶ್ಯನ್ ಚಾಂಪಿಯನ್,ಇರಾನ್‌ನ ರೆಝಾ ಅಟ್ರಿಗೆ ಶಾಕ್ ನೀಡಿ ಕಂಚು ಗೆದ್ದುಕೊಂಡರು.

ಬಜರಂಗ್ ಕಂಚಿನ ಪದಕಕ್ಕಾಗಿ ನಡೆದ ಸ್ಪರ್ಧೆಯಲ್ಲಿ ಒಚಿರ್ ವಿರುದ್ಧ 8-7 ಅಂತರದಿಂದ ಜಯ ಸಾಧಿಸಿದರು. ರವಿ ದಾಹಿಯಾ ಪುರುಷರ 57 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ರೆಝಾ ಅಟ್ರಿ ಅವರನ್ನು 6-3 ಅಂತರದಿಂದ ಸೋಲಿಸಿ ಕಂಚು ಜಯಿಸಿದರು.

ಬಜರಂಗ್ ಕಳೆದ ವರ್ಷ ಬೆಳ್ಳಿ ಹಾಗೂ 2013ರಲ್ಲಿ ಕಂಚಿನ ಪದಕ ಜಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News