ತೃತೀಯ ಲಿಂಗಿಗಳು ಮತ್ತು ಸಲಿಂಗಿಗಳನ್ನು ಬೆಂಬಲಿಸಿದ ಸಂಘಪರಿವಾರ

Update: 2019-09-20 18:34 GMT

ಹೊಸದಿಲ್ಲಿ,ಸೆ.20: ಸಲಿಂಗಿಗಳು ಮತ್ತು ತೃತೀಯ ಲಿಂಗಿಗಳ ಹಕ್ಕುಗಳನ್ನು ಬೆಂಬಲಿಸುವುದಾಗಿ ತಿಳಿಸಿರುವ ಸಂಘ ಪರಿವಾರ ಲಿವ್ ಇನ್ ಸಂಬಂಧಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ. ಸಂಘ ಪರಿವಾರದ ಮುಖ್ಯಸ್ಥ ಮೋಹನ್ ಭಾಗವತ್ ಅವರು ಅಕ್ಟೋಬರ್ ಒಂದರಂದು ಬಿಡುಗಡೆ ಮಾಡಲಿರುವ, ದಿ ಆರ್‌ಎಸ್ಸೆಸ್ ರೋಡ್‌ಮ್ಯಾಪ್ಸ್ ಫೋರ್ 21ಫಸ್ಟ್ ಸೆಂಚುರಿ ಹೆಸರಿನ ಪುಸ್ತಕದಲ್ಲಿ ಈ ನಿಲುವನ್ನು ವ್ಯಕ್ತಪಡಿಸಲಾಗಿದೆ. 

ಎಬಿವಿಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸುನೀಲ್ ಅಂಬೆಕರ್ ಬರೆದಿರುವ ಈ ಪುಸ್ತಕದಲ್ಲಿ ಸಮಕಾಲೀನ ವಿಷಯಗಳ ಬಗ್ಗೆ ಆರ್‌ಎಸ್ಸೆಸ್‌ನ ನಿಲುವುಗಳ ಬಗ್ಗೆ ಉಲ್ಲೇಖಿಸಿರುವುದರಿಂದ ಕುತೂಹಲಕ್ಕೆ ಕಾರಣವಾಗಿದೆ. ಈ ಪುಸ್ತಕದಲ್ಲಿನ ಅಧ್ಯಾಯವೊಂದರಲ್ಲಿ, ಎಲ್ಲಿಯವರೆಗೆ ಸಲಿಂಗಕಾಮ ಸಮಾಜದ ಇತರರಿಗೆ ಜೀವನವನ್ನು ಬಾಧಿಸುವುದಿಲ್ಲವೋ ಅಲ್ಲಿಯತನಕ ಅದನ್ನು ಕ್ರಿಮಿನಲ್ ಅಪರಾಧ ಎಂದು ಪರಿಗಣಿಸಬಾರದು ಎಂದು ದತ್ತಾತ್ರೆಯ ಹೊಸಬಾಳೆಯವರು ಹೇಳಿರುವುದನ್ನು ಉಲ್ಲೇಖಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News