ಜಸ್ಟಿಸ್ ಖುರೇಷಿ ಪದೋನ್ನತಿ ವಿವಾದ: ತನ್ನ ಶಿಫಾರಸನ್ನು ಬದಲಿಸಿದ ಸುಪ್ರೀಂ ಕೋರ್ಟ್

Update: 2019-09-21 13:21 GMT

ಹೊಸದಿಲ್ಲಿ, ಸೆ.21: ಜಸ್ಟಿಸ್ ಅಕಿಲ್ ಖುರೇಷಿ ಅವರನ್ನು ಮಧ್ಯ ಪ್ರದೇಶ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯನ್ನಾಗಿಸಬೇಕೆಂಬ ತನ್ನ ಶಿಫಾರಸನ್ನು  ಸುಪ್ರೀಂ ಕೋರ್ಟಿನ ಕೊಲಿಜಿಯಂ ಬದಲಾಯಿಸಿದ್ದು, ಅವರನ್ನು ತ್ರಿಪುರಾ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಳಿಸಬೇಕೆಂದು ಶಿಫಾರಸು ಮಾಡಿದೆ.

ಖುರೇಷಿ ಅವರನ್ನು ಮಧ್ಯ ಪ್ರದೇಶಕ್ಕೆ ನೇಮಕಗೊಳಿಸುವುದಕ್ಕೆ ಕೇಂದ್ರ ಆಕ್ಷೇಪ ಸೂಚಿಸಿದ ಕೆಲವೇ ವಾರಗಳಲ್ಲಿ ಈ ಬೆಳವಣಿಗೆ ನಡೆದಿದೆ.

ಗುಜರಾತ್ ಹೈಕೋರ್ಟಿನ ಅತ್ಯಂತ ಹಿರಿಯ ವಕೀಲರಾಗಿರುವ ಖುರೇಷಿ ಅವರ ಪದೋನ್ನತಿಗೆ ಮೇ 10ರಂದು ಕೊಲಿಜಿಯಂ ಶಿಫಾರಸು ಮಾಡಿತ್ತು. ಆದರೆ ಇದನ್ನು ಒಪ್ಪದ ಕೇಂದ್ರ ಜೂನ್ 7ರಂದು ಅಧಿಸೂಚನೆ ಹೊರಡಿಸಿ ಜಸ್ಟಿಸ್ ರವಿಶಂಕರ್ ಝಾ ಅವರನ್ನು ಮಧ್ಯ ಪ್ರದೇಶ ಹೈಕೋರ್ಟಿನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಕಗೊಳಿಸಿತ್ತು.

ಮಧ್ಯ ಪ್ರದೇಶ ಹೈಕೋರ್ಟ್ ದೇಶದ ಆತ್ಯಂತ ದೊಡ್ಡ ಹೈಕೋರ್ಟುಗಳಲ್ಲಿ ಒಂದಾಗಿದ್ದರೆ, ತ್ರಿಪುರಾ ಹೈಕೋರ್ಟ್  ಸಣ್ಣ ಹೈಕೋರ್ಟ್ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News