×
Ad

ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿ ಮಾಜಿ ಕ್ರಿಕೆಟಿಗ ಜೆದೇವ್ ಶಾ ಆಯ್ಕೆ

Update: 2019-09-21 23:41 IST

ಹೊಸದಿಲ್ಲಿ, ಸೆ.21: ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್(ಎಸ್‌ಸಿಎ)ಅಧ್ಯಕ್ಷರಾಗಿ ಜೈದೇವ್ ಶಾ ಆಯ್ಕೆಯಾಗಿದ್ದಾರೆ. ಆಯಾ ಹುದ್ದೆಗೆ ಆಯ್ಕೆಯಾಗಿರುವ 11 ಅಪೆಕ್ಸ್ ಕೌನ್ಸಿಲ್ ಸದಸ್ಯರುಗಳು ಸಹಿತ ಎಸ್‌ಸಿಎನ ಐದು ಪದಾಧಿಕಾರಿಗಳ ಹೆಸರುಗಳನ್ನು ಚುನಾವಣಾಧಿಕಾರಿ ವರೇಶ್ ಸಿನ್ಹಾ ಘೋಷಿಸಿದರು.

ಶಾ ಅಧ್ಯಕ್ಷರಾಗಿ ಆಯ್ಕೆಯಾದರೆ, ದೀಪಕ್ ಲಖಾನಿ ಉಪಾಧ್ಯಕ್ಷರಾಗಿ, ಹಿಮಾಂಶು ಶಾ ಗೌರವ ಕಾರ್ಯದರ್ಶಿಯಾಗಿ, ಕರಣ್ ಶಾ ಗೌರವ ಜೊತೆ ಕಾರ್ಯದರ್ಶಿಯಾಗಿ ಹಾಗೂ ಶ್ಯಾಮ್ ರೈಚುರ ಗೌರವ ಖಜಾಂಚಿಯಾಗಿ ನೇಮಕಗೊಂಡಿದ್ದಾರೆ.

ಚುನಾವಣಾಧಿಕಾರಿ ವರೇಶ್ ಸಿನ್ಹಾ ರಾಜ್ಯದ ಮಾಜಿ ಚುನಾವಣಾ ಆಯುಕ್ತರಾಗಿದ್ದು, ಗುಜರಾತ್‌ನ ಮುಖ್ಯ ಕಾರ್ಯದರ್ಶಿಯಾಗಿದ್ದಾರೆ.

 ಬಿಸಿಸಿಐನ ಮಾಜಿ ಅಧಿಕಾರಿ ನಿರಂಜನ್ ಶಾ ಪುತ್ರ ಜೈದೇವ್ ಶಾ 120 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು, ಸೌರಾಷ್ಟ್ರ ತಂಡಕ್ಕೆ ದಾಖಲೆ 110 ಬಾರಿ ನಾಯಕನಾಗಿದ್ದರು. ಜೈದೇವ್ ನಾಯಕತ್ವದಲ್ಲಿ ಸೌರಾಷ್ಟ್ರ 2012-13 ಹಾಗೂ 2015-16ರ ರಣಜಿ ಟ್ರೋಫಿಯಲ್ಲಿ ಎರಡನೇ ಸ್ಥಾನ ಪಡೆದಿತ್ತು. 2007-08ರಲ್ಲಿ ವಿಜಯ ಹಝಾರೆ ಟ್ರೋಫಿ ಜಯಿಸಿತ್ತು. ಜೈದೇವ್ 2018ರಲ್ಲಿ ಎಲ್ಲ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News