ಭಾರತದ ಕ್ರಿಕೆಟ್ ತಂಡದ ಆಟಗಾರರ ದಿನ ಭತ್ಯೆ ದುಪ್ಪಟ್ಟು

Update: 2019-09-21 18:16 GMT

ಹೊಸದಿಲ್ಲಿ, ಸೆ.21: ವಿದೇಶದಲ್ಲಿ ನಡೆಯುವ ಸರಣಿಯಲ್ಲಿ ಆಡಲು ತೆರಳುವ ಭಾರತದ ಕ್ರಿಕೆಟ್ ತಂಡದ ಆಟಗಾರರ ದಿನ ಭತ್ಯೆ ಎರಡು ಪಟ್ಟು ಏರಿಕೆಯಾಗಲಿದೆ. ಅಲ್ಲದೆ ತವರಿನಲ್ಲಿ ನಡೆಯುವ ಸರಣಿಗೂ ಆಟಗಾರರ ದಿನಭತ್ಯೆ ಹೆಚ್ಚಳವಾಗಿದೆ.ಬಿಸಿಸಿಐ ಆಡಳಿತಾಧಿಕಾರಿಗಳ ಸಮಿತಿ(ಸಿಒಎ) ಈ ನಿರ್ಧಾರ ಕೈಗೊಂಡಿದೆ. ವಿದೇಶಿ ಪ್ರವಾಸಗಳಿಗೆ ಭಾರತದ ಆಟಗಾರರು ದಿನಭತ್ಯೆ 250 ಯುಎಸ್ ಡಾಲರ್( ರೂ.17,799.30) ದಿನಭತ್ಯೆ ಪಡೆಯಲಿದ್ದಾರೆ. ಈಗ ಪಡೆಯುತ್ತಿರುವ ದಿನಭತ್ಯೆ 125 ಯುಎಸ್ ಡಾಲರ್(8,899.65) . ಆದರೆ ಮನೆಭತ್ಯೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಈಗ ನೀಡಲಾಗುವ ಮನೆಭತ್ಯೆ ರೂ.7500.

 ಇದೇ ವೇಳೆ ಕೋಚಿಂಗ್ ಸಿಬ್ಬಂದಿ ಮತ್ತು ಆಯ್ಕೆ ಸಮಿತಿ ಸದಸ್ಯರ ದಿನಭತ್ಯೆ ಏರಿಕೆಯಾಗಿದೆ. ಆಯ್ಕೆ ಸಮಿತಿ ಸದಸ್ಯರು ಇದೀಗ ಮನೆಭತ್ಯೆ ರೂ.3,500 ಪಡೆಯುತ್ತಿದ್ದಾರೆ. ಮುಂದೆ 7,500 ರೂ ದೊರೆಯಲಿದೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News