ಡೇವಿಡ್ ಬೂನ್ ಐಸಿಸಿ ಮ್ಯಾಚ್ ರೆಫರಿ

Update: 2019-09-21 18:20 GMT

ಕರಾಚಿ, ಸೆ.21: ದ್ವಿತೀಯ ದರ್ಜೆಯ ಶ್ರೀಲಂಕಾ ತಂಡದ ವಿರುದ್ಧ ಪಾಕಿಸ್ತಾನದ ಸೀಮಿತ ಓವರ್‌ಗಳ ಸ್ವದೇಶಿ ಸರಣಿಗೆ ಐಸಿಸಿ ಆಸ್ಟ್ರೇಲಿಯದ ಮಾಜಿ ಬ್ಯಾಟ್ಸ್ ಮನ್ ಡೇವಿಡ್ ಬೂನ್‌ರನ್ನು ಮ್ಯಾಚ್ ರೆಫರಿ ಆಗಿ ನೇಮಕಗೊಳಿಸಿದೆ. ಸೆ.27ರಿಂದ ಅಕ್ಟೋಬರ್ 9ರ ತನಕ ಕರಾಚಿ ಹಾಗೂ ಲಾಹೋರ್‌ನಲ್ಲಿ ನಡೆಯುವ ತಲಾ 3 ಪಂದ್ಯಗಳ ಏಕದಿನ ಹಾಗೂ ಟ್ವೆಂಟಿ-20 ಸರಣಿಗೆ ಬೂನ್ ಮ್ಯಾಚ್ ರೆಫರಿ ಆಗಿರುತ್ತಾರೆ ಎಂದು ಐಸಿಸಿ ಶನಿವಾರ ದೃಢಪಡಿಸಿದೆ.

 58ರ ಹರೆಯದ ಬೂನ್ ಐಸಿಸಿ ಮ್ಯಾಚ್ ರೆಫರಿ ಸಮಿತಿಯಲ್ಲಿರುವ ಅತ್ಯಂತ ಹಿರಿಯ ಅಧಿಕಾರಿ. ಇವರು ಈಗಾಗಲೇ 2011ರ ಬಳಿಕ 135 ಏಕದಿನ ಹಾಗೂ 51 ಟ್ವೆಂಟಿ-20 ಪಂದ್ಯಗಳಲ್ಲಿ ಮ್ಯಾಚ್ ರೆಫರಿ ಆಗಿ ಕಾರ್ಯನಿರ್ವಹಿಸಿದ್ದಾರೆ. 1984 ಹಾಗೂ 1996ರ ಮಧ್ಯೆ ಆಸ್ಟ್ರೇಲಿಯದ ಪರ 107 ಟೆಸ್ಟ್ ಹಾಗೂ 181 ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ.

ಸರಣಿಗೆ ಎಲೈಟ್ ಸಮಿತಿಯ ಅಂಪೈರ್‌ಗಳಾಗಿ ಜೋಯೆಲ್ ವಿಲ್ಸನ್ ಹಾಗೂ ಮಿಚೆಲ್ ಗೌಫ್‌ರನ್ನು ಐಸಿಸಿ ನೇಮಿಸಿದೆ.ಗೌಫ್ ಈ ವರ್ಷಾರಂಭದಲ್ಲಿ ಪಿಎಸ್‌ಎಲ್ ಫೈನಲ್‌ಗೋಸ್ಕರ ಕರಾಚಿಗೆ ತೆರಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News