ಮರಿನ್ ಚಾಂಪಿಯನ್

Update: 2019-09-22 19:03 GMT

ಬೀಜಿಂಗ್, ಸೆ.22: ಒಲಿಂಪಿಕ್ಸ್ ಚಾಂಪಿಯನ್ ಕರೊಲಿನಾ ಮರಿನ್ ಚೀನಾ ಓಪನ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಸಿಂಗಲ್ಸ್ ಪ್ರಶಸ್ತಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ವೃತ್ತಿಜೀವನಕ್ಕೆ ಮಾರಕವಾಗಬಲ್ಲ ಗಾಯದಿಂದ ಚೇತರಿಸಿಕೊಂಡು 8 ತಿಂಗಳ ಬಳಿಕ ಸಕ್ರಿಯ ಬ್ಯಾಡ್ಮಿಂಟನ್‌ಗೆ ವಾಪಸಾಗಿರುವ ಮರಿನ್ ಚೀನಾ ಓಪನ್ ಪ್ರಶಸ್ತಿ ಜಯಿಸಿ ಯಶಸ್ವಿ ಪುನರಾಗಮನ ಮಾಡಿದ್ದಾರೆ.

ಸ್ಪೇನ್ ಆಟಗಾರ್ತಿ ಮರಿನ್‌ಗೆ ಜನವರಿಯಲ್ಲಿ ನಡೆದ ಇಂಡೋನೇಶ್ಯ ಮಾಸ್ಟರ್ಸ್ ಟೂರ್ನಿಯ ವೇಳೆ ಬಲಗಾಲಿಗೆ ಗಂಭೀರ ಗಾಯವಾಗಿತ್ತು. ಈ ಗಾಯಕ್ಕೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರು ಬ್ಯಾಡ್ಮಿಂಟನ್ ಕೋರ್ಟ್‌ಗೆ ವಾಪಸಾಗುವ ಮೊದಲು ಸುದೀರ್ಘ ಸಮಯ ಪುನಶ್ಚೇತನ ಶಿಬಿರದಲ್ಲಿ ಭಾಗವಹಿಸಿದ್ದರು.

ಕಳೆದ ವಾರ ವಿಯೆಟ್ನಾಂ ಓಪನ್‌ನ ಮೊದಲ ಸುತ್ತಿನಲ್ಲಿ ಎಡವಿದ ಬಳಿಕ ಮೂರು ಬಾರಿ ವಿಶ್ವ ಚಾಂಪಿಯನ್ ಜಯಸಿರುವ ಮರಿನ್ ಆಡಿರುವ ಎರಡನೇ ಟೂರ್ನಿ ಇದಾಗಿದೆ. ಮರಿನ್ ರವಿವಾರ ನಡೆದ ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ಮಾಜಿ ನಂ.1 ತೈ ಝು ಯಿಂಗ್‌ರನ್ನು 14-21, 21-17 ಹಾಗೂ 21-18 ಗೇಮ್‌ಗಳ ಅಂತರದಿಂದ ಮಣಿಸಿದರು. ಮರಿನ್ ತೈವಾನ್ ಆಟಗಾರ್ತಿ ಯಿಂಗ್ ವಿರುದ್ಧ ಈ ತನಕ ಆಡಿರುವ ಎಲ್ಲ 6 ಪಂದ್ಯಗಳಲ್ಲೂ ಸೋತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News