ಮಾಜಿ ಕ್ರಿಕೆಟಿಗ ಮಾಧವ್ ಅಪ್ಟೆ ನಿಧನ

Update: 2019-09-23 12:02 GMT

ಮುಂಬೈ, ಸೆ.23:  ಹಿರಿಯ ಕ್ರಿಕೆಟಿಗ ಮಾಧವ್ ಆಪ್ಟೆ (86)ಸೋಮವಾರ ಬೆಳಗ್ಗೆ  ಮುಂಬೈನ ಬ್ರೀಚ್ ಕ್ಯಾಂಡಿ  ಆಸ್ಪತ್ರೆಯಲ್ಲಿ ಹೃದಯಾಘಾತದಿಂದ  ನಿಧನರಾದರು.  

ಭಾರತ ಮತ್ತು ಮುಂಬೈ ತಂಡದ  ಮಾಜಿ ಆರಂಭಿಕ ಬ್ಯಾಟ್ಸ್ ಮನ್  ಆಗಿದ್ದ  ಮಾಧವ್ ಆಪ್ಟೆ    ಬೆಳಗ್ಗೆ 6.09 ಕ್ಕೆ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಮಗ ವಾಮನ್ ಆಪ್ಟೆ ತಿಳಿಸಿದ್ದಾರೆ.

ಮಾಧವ್ ಆಪ್ಟೆ ಏಳು ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. 542 ರನ್ , 1ಶತಕ,  ಮೂರು ಅರ್ಧಶತಕಗಳನ್ನು ಗಳಿಸಿದ್ದಾರೆ. ಅವರ ಗರಿಷ್ಠ ವೈಯಕ್ತಿಕ ಸ್ಕೋರ್  ಅಜೇಯ  163. ಅವರು  ಪ್ರಥಮ ದರ್ಜೆ  ಕ್ರಿಕೆಟ್ ನಲ್ಲಿ ಉತ್ತಮ ದಾಖಲೆಯನ್ನು ಹೊಂದಿದ್ದರು. 67 ಪಂದ್ಯಗಳಲ್ಲಿ  3,336 ರನ್ ಗಳಿಸಿದರು.  ಇದರಲ್ಲಿ ಆರು ಶತಕಗಳು ಮತ್ತು 16 ಅರ್ಧಶತಕಗಳು ಸೇರಿವೆ. ಅವರ ಗರಿಷ್ಠ ವೈಯಕ್ತಿಕ ಸ್ಕೋರ್ ಅಜೇಯ 165. ಮುಂಬೈ ಪರ 46 ಮತ್ತು ಬಂಗಾಳ ತಂಡದ ಪರ 3 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. 

ಅಪ್ಟೆ 1952ರ ನವೆಂಬರ್‌ 13ರಂದು   ಮುಂಬೈನಲ್ಲಿ ಪಾಕಿಸ್ತಾನದ ವಿರುದ್ಧ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ದರು. ಏಪ್ರಿಲ್ 1953 ರಲ್ಲಿ ಕಿಂಗ್ಸ್ ಸ್ಟನ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದರು. ಚೊಚ್ಚಲ ಟೆಸ್ಟ್ನಲ್ಲಿ ಅವರು ಕ್ರಮವಾಗಿ 30 ಮತ್ತು 10 ರನ್ ಗಳಿಸಿದರು.

 ದೇಶೀಯ ಕ್ರಿಕೆಟ್‌ನಲ್ಲಿ ಮುಂಬೈ ತಂಡದ  ನಾಯಕರಾಗಿದ್ದರು . ಆಪ್ಟೆ ಹಲವು ವರ್ಷಗಳ ಕಾಲ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾ ಮತ್ತು ಲೆಜೆಂಡ್ಸ್ ಕ್ಲಬ್‌ನ ಅಧ್ಯಕ್ಷರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News