×
Ad

ಜಮ್ಮು ಕಾಶ್ಮೀರ: 40 ಕಿ.ಗ್ರಾಂ ಸ್ಫೋಟಕ ವಶಕ್ಕೆ

Update: 2019-09-23 21:06 IST

ಶ್ರೀನಗರ, ಸೆ.23: ಜಮ್ಮು ಕಾಶ್ಮೀರದ ಕಥುವಾ ಪ್ರದೇಶದಲ್ಲಿ ಭದ್ರತಾ ಪಡೆಗಳು 40 ಕಿ.ಗ್ರಾಂ ಸ್ಫೋಟಕ ಪತ್ತೆಯಾಗಿದ್ದು ಇದನ್ನು ವಶಕ್ಕೆ ಪಡೆಯಲಾಗಿದೆ . ಇದರೊಂದಿಗೆ ಭಾರೀ ವಿದ್ವಂಸಕ ಕೃತ್ಯವೊಂದನ್ನು ತಡೆದಂತಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸ್ಪೋಟಕಗಳನ್ನು ಅಡಗಿಸಿಟ್ಟಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ದಾಳಿ ನಡೆಸಿದ್ದು ಓರ್ವನನ್ನು, ಬಂಧಿಸಲಾಗಿದೆ. ಈ ಪ್ರದೇಶದಲ್ಲಿ ಇನ್ನಷ್ಟು ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದವರು ಹೇಳಿದ್ದಾರೆ. ಈ ಮಧ್ಯೆ, ಪೂಂಛ್ ಜಿಲ್ಲೆಯ ಮೇಂಧರ್ ಮತ್ತು ಕೇರ್ಣಿ ವಲಯದಲ್ಲಿ ಮತ್ತೆ ಕದನ ವಿರಾಮ ಒಪ್ಪಂದ ಉಲ್ಲಂಘಿಸಿರುವ ಪಾಕಿಸ್ತಾನ ಮೋರ್ಟರ್ ಶೆಲ್ ದಾಳಿ ನಡೆಸಿವೆ.

ಇದಕ್ಕೆ ಭಾರತದ ಪಡೆಗಳು ಸೂಕ್ತ ಪ್ರತ್ಯುತ್ತರ ನೀಡಿವೆ. ಈ ವರ್ಷ ಪಾಕಿಸ್ತಾನದ ಪಡೆಗಳು 2,050ಕ್ಕೂ ಹೆಚ್ಚು ಬಾರಿ ಅಪ್ರಚೋದಿತವಾಗಿ ಕದನ ವಿರಾಮ ಉಲ್ಲಂಘಿಸಿವೆ ಎಂದು ಜಮ್ಮು ವಲಯದ ಐಜಿಪಿ ಮುಕೇಶ್ ಸಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News