ಮಧ್ಯ ಪ್ರದೇಶ ದುರಂತ: ಗ್ರಾಮ ತೊರೆಯಲು ನಿರ್ಧರಿಸಿದ ಮಕ್ಕಳನ್ನು ಕಳೆದುಕೊಂಡ ದಲಿತ ಕುಟುಂಬ

Update: 2019-09-27 10:20 GMT
Photo: thehindu.com

ಭೋಪಾಲ್: “ಪಂಚಾಯತ್ ಎಲ್ಲರಿಗೂ ಶೌಚಾಲಯ ನಿರ್ಮಿಸಿ ಕೊಟ್ಟರೂ ನಮಗೆ ಕೊಟ್ಟಿಲ್ಲ. ಮನೆ ಹಾಗೂ ಶೌಚಾಲಯ ಸವಲತ್ತು ಪಡೆಯಲು ನಾನು ಅರ್ಹ ಎಂದು ನನಗೆ ಹೇಳಲಾದಾಗ ನಾನು ಪಂಚಾಯತ್ ಕಾರ್ಯದರ್ಶಿಗೆ ಅರ್ಜಿ ಸಲ್ಲಿಸಿದ್ದೆ. ಆದರೆ ನನ್ನ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದು ನನಗೆ ಹೇಳಲಾಯಿತು,'' ಎಂದು ತನ್ನ ಪುತ್ರ ಅರುಣ್ ಹಾಗೂ ಸೋದರಿ ಖುಷಿಯನ್ನು ಕಳೆದುಕೊಂಡು ಉಮ್ಮಳಿಸಿ ಬರುತ್ತಿರುವ ದುಃಖದ ನಡುವೆ ಬಬ್ಲೂ ವಾಲ್ಮೀಕಿ ಹೇಳುತ್ತಾನೆ.

ಬಯಲು ಪ್ರದೇಶದಲ್ಲಿ ಮಲ ವಿಸರ್ಜನೆಗೈದಿದ್ದಕ್ಕೆ ಇಬ್ಬರು ಮಕ್ಕಳನ್ನು ಶಿವಪುರಿ ಜಿಲ್ಲೆಯ ಭಾವ್ಕೇಢಿ ಗ್ರಾಮದಲ್ಲಿ ಬುಧವಾರ ಹೊಡೆದು ಸಾಯಿಸಿದ ಪ್ರಕರಣದಲ್ಲಿ ಪೊಲೀಸರು ಈಗಾಗಲೇ ರಾಮಶೇಶ್ವರ್ ಯಾದವ್ ಹಾಗೂ ಹಕೀಂ ಯಾದವ್ ಅವರನ್ನು ಬಂಧಿಸಿ ಕೊಲೆ ಹಾಗೂ ಪರಿಶಿಷ್ಟ ಜಾತಿ,ಪಂಗಡಗಳ ದೌರ್ಜನ್ಯ ಕಾಯಿದೆ ತಡೆಯನ್ವಯ ಪ್ರಕರಣ ದಾಖಲಿಸಿದ್ದಾರೆ.

ಆದರೆ ಕುಟುಂಬವಿನ್ನೂ ಭಯದಲ್ಲಿದ್ದು ಆರೋಪಿಗಳ ಕಡೆಯವರು ತಮ್ಮ ಮೇಲೆ ದಾಳಿ ನಡೆಸಬಹುದೆಂಬ ಭೀತಿಯಿಂದ ಗ್ರಾಮವನ್ನೇ ತೊರೆಯಲು ನಿರ್ಧರಿಸಿದೆ ಎಂದು ಬಬ್ಲೂ ಹೇಳುತ್ತಾರೆ.

“ಯಾದವ ಸೋದರರ ಗದ್ದೆ ಪಕ್ಕದ ರಸ್ತೆ ಬದಿಯಲ್ಲಿದ್ದ ಮರದ ಗೆಲ್ಲೊಂದನ್ನು ಎರಡು ವರ್ಷಗಳ ಹಿಂದೆ ಕಡಿದು ನನ್ನ ಗುಡಿಸಲಿಗೆ ಬಳಸಿದ್ದೆ. ಅದಕ್ಕಾಗಿ ಅವರು ನನ್ನನ್ನು ನಿಂದಿಸಿ ಕೊಲೆಗೈಯ್ಯುವ ಬೆದರಿಕೆಯೊಡ್ಡಿದ್ದರು,'' ಎಂದು ಅವರು ನೆನಪಿಸುತ್ತಾರೆ.

ದಲಿತ ಸಮುದಾಯದ ಮೆಹ್ತರ್ ಪಂಗಡಕ್ಕೆ ಸೇರಿದ ವಾಲ್ಮೀಕ್ ಕುಟುಂಬ 20 ವರ್ಷಗಳ ಹಿಂದೆ ಇಲ್ಲಿಗೆ ಆಗಮಿಸಿ ಜಮೀನನ್ನು ರೂ 45,00ಕ್ಕೆ ಖರೀದಿಸಲು ಒಪ್ಪಂದಕ್ಕೆ ಬಂದಾಗ ಇಲ್ಲಿನ ಆಡಳಿತಗಾರರು ಎಂದು ಕರೆಯಲ್ಪಟ್ಟಿದ್ದರು.  ಅಲ್ಲಿನ ಸಮಾರಂಭಗಳಲ್ಲಿ ಶುಲ್ಕಕ್ಕಾಗಿ ಧಪ್ಲಿ ಎಂಬ ಡೋಲನ್ನು ಬಾರಿಸುವ ಹಕ್ಕನ್ನು ಕೂಡ ಈ ಕುಟುಂಬ ಪಡೆದಿತ್ತು. ಆರೋಪಿ ಯಾದವ್ ಸೋದರನ ವಿವಾಹ ಸಮಾರಂಭದಲ್ಲಿ ವಾಲ್ಮೀಕ್ ಕುಟುಂಬ ಧಪ್ಲಿ ಬಾರಿಸಿತ್ತು. ತನ್ನ ಎರಡೂವರೆ ಬಿಘಾ ಜಮೀನನ್ನೂ ಯಾದವ್ ಕುಟುಂಬ ಸೆಳೆದಿದೆ ಎಂದು ವಾಲ್ಮೀಕ್ ಹೇಳುತ್ತಾರೆ.

ಗ್ರಾಮದ ಶಾಲೆಯಲ್ಲಿ ಜಾತಿ ತಾರತಮ್ಯ ಬಹಳಷ್ಟಿದ್ದು ದಲಿತ ಮಕ್ಕಳು ತಮ್ಮದೇ ಬಟ್ಟಲು ತರಬೇಕಿತ್ತು, ಯಾದವರ ಮಕ್ಕಳು ಹಾಗೂ ನಮ್ಮ ಮಕ್ಕಳು ಒಂದೇ ಬೆಂಚಿನಲ್ಲಿ ಕುಳಿತುಕೊಳ್ಳುವ ಹಾಗಿರಲಿಲ್ಲ ಎಂದು ಹೇಳುವ ಅವರು ಇದೇ ಕಾರಣಕ್ಕೆ ಶಾಲೆಯಿಂದ ಮಕ್ಕಳನ್ನು ಬಿಡಿಸಿದ್ದಾಗಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News