×
Ad

ವಿಧಾನಸಭಾ ಉಪಚುನಾವಣೆ: ಹಾಮಿರ್‌ಪುರ ಕ್ಷೇತ್ರದಲ್ಲಿ ಬಿಜೆಪಿ ಗೆಲುವು

Update: 2019-09-27 21:35 IST

ಲಕ್ನೊ, ಸೆ.27: ಉತ್ತರಪ್ರದೇಶದ ಹಾಮಿರ್‌ಪುರ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಯುವರಾಜ್ ಸಿಂಗ್ ತಮ್ಮ ಸಮೀಪದ ಪ್ರತಿಸ್ಪರ್ಧಿ ಸಮಾಜವಾದಿ ಪಕ್ಷದ ಮನೋಜ್ ಪ್ರಜಾಪ್ರತಿ ವಿರುದ್ಧ 17,846 ಮತಗಳಿಂದ ಗೆಲುವು ಸಾಧಿಸಿದ್ದಾರೆ.

ಸೆ.23ರಂದು ನಡೆದಿದ್ದ ಉಪಚುನಾವಣೆಯಲ್ಲಿ ಶೇ.51 ಮತದಾನವಾಗಿತ್ತು. ಯುವರಾಜ್ ಸಿಂಗ್ 74,374 ಮತ, ಮನೋಜ್ ಪ್ರಜಾಪ್ರತಿ 56,528 ಮತ ಗಳಿಸಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಯುವರಾಜ್ ಸಿಂಗ್ ಗೆಲುವು ಪ್ರಧಾನಿಯವರ ‘ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್’ ಚಿಂತನೆಗೆ ಸಂದ ಗೆಲುವು ಎಂದು ಉ.ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಸಿಂಗ್ ಅಭಿನಂದಿಸಿದ್ದಾರೆ. ಈ ಕ್ಷೇತ್ರದ ಶಾಸಕರಾಗಿದ್ದ ಬಿಜೆಪಿಯ ಅಶೋಕ್ ಕುಮಾರ್ ಸಿಂಗ್ ಚಾಂಡೇಲ್ ಕೊಲೆ ಪ್ರಕರಣದಲ್ಲಿ ಅಪರಾಧಿ ಎಂದು ಘೋಷಿಸಲ್ಪಟ್ಟು ಶಾಸಕತ್ವದಿಂದ ಅನರ್ಹಗೊಂಡ ಹಿನ್ನೆಲೆಯಲ್ಲಿ ಈ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿತ್ತು. ಕಣದಲ್ಲಿ ಕಾಂಗ್ರೆಸ್‌ನ ಹರ್ದೀಪಕ್ ನಿಶಾದ್, ಬಿಎಸ್ಪಿಯ ನೌಶಾದ್ ಆಲಿ ಸಹಿತ 9 ಅಭ್ಯರ್ಥಿಗಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News