ಸ್ವತಂತ್ರ ಭಾರತದ ಸಮರ್ಥ ಸೇನಾನಿ ಯಾರು?

Update: 2019-09-29 18:31 GMT

ಭಾಗ-1

ಚುನಾವಣೆಗಳು ಸಮೀಪಿಸುತ್ತಿರುವಾಗ ಶಿವ ಸೇನೆಯ ಮುಖ್ಯಸ್ಥ (ಠಾಕ್ರೆ) ಸಾವರ್ಕರ್‌ರನ್ನು ಹಾಡಿ ಹೊಗಳಿರುವುದು ಸ್ವಯಂ ಸ್ಫೂರ್ತಿಯಿಂದ ಎಂದು ಭಾವಿಸುವುದು ಪೆದ್ದುತನವಾಗುತ್ತದೆ. ಬದಲಾಗಿ, ಒಂದಷ್ಟು ಮತಗಳನ್ನು ಬಾಚಿಕೊಳ್ಳುವ ಉದ್ದೇಶದಿಂದ ಭಾವನಾತ್ಮಕ ವಿಷಯವೊಂದನ್ನು ಎತ್ತುವ ಒಂದು ಪ್ರಯತ್ನ ಇದು.

ಯಾರು ಸ್ವತಂತ್ರ ಭಾರತದ ಅತ್ಯುತ್ತಮ ಪ್ರಧಾನಿಯಾಗಬಹುದಿತ್ತು?

ನೆಹರೂ ಅಥವಾ(ವಲ್ಲಭಾ ಭಾಯ್) ಪಟೇಲ್?

ಕಳೆದ ಐದು ವರ್ಷಗಳಿಗಿಂತಲೂ ಹೆಚ್ಚಿನ ಸಮಯದಿಂದ, ಬಿಜೆಪಿಯ ಕೃಪೆಯಿಂದಾಗಿ, ನಾವು ಒಂದು ಉತ್ಪಾದಿತ ಚರ್ಚೆಗೆ ಸಾಕ್ಷಿಯಾಗಿದ್ದೇವೆ. ತಮ್ಮನ್ನು ‘ಗಾಂಧಿಯ ಸಿಪಾಯಿಗಳು’ ಎಂದು ಕರೆದುಕೊಂಡಿದ್ದ ಸ್ವತಂತ್ರ ಭಾರತದ ಇಬ್ಬರು ಪ್ರಮುಖ ನಾಯಕರ ನಡುವೆ ಒಂದು ಸುಳ್ಳು ವಿಂಗಡೆಯನ್ನೂ, ದ್ವಿತ್ವವನ್ನು ಸೃಷ್ಟಿಸಲು ಬಿಜೆಪಿ ತನ್ನ ಬತ್ತಳಿಕೆಯಲ್ಲಿರುವ ಎಲ್ಲ ಅಸ್ತ್ರಗಳನ್ನು ಬಳಸಿದೆ. ಅದೇನಿದ್ದರೂ, ಕೇಸರಿ ಬಣದ ಒಳಗಿರುವ ವಿಭಿನ್ನ ದೃಷ್ಟಿಕೋನಗಳಿಂದಾಗಿ ಹಿಂದುತ್ವ ಬ್ರಿಗೇಡ್‌ನ ಒಳಗಿಂದಲೇ ಸರ್ದಾರ್ ಪಟೇಲರಿಗೆ ಓರ್ವ ಹೊಸ ಪ್ರತಿಸ್ಪರ್ಧಿ ಮೂಡಿ ಬಂದಿರುವಂತೆ ಕಾಣಿಸುತ್ತಿದೆ. ಈ ಪ್ರತಿಸ್ಪರ್ಧಿ ( ನೆಹರೂ/ಪಟೇಲರಿಗಿಂತ) ‘‘ಉತ್ತಮ ಪ್ರಧಾನಿ’’ಯಾಗುತ್ತಿದ್ದರು ಎಂದು ಬಿಂಬಿಸಲಾಗುತ್ತಿದೆ.

ಶಿವ ಸೇನಾ ಮುಖ್ಯಸ್ಥ ಹಾಗೂ ಈಗ ಮಹಾರಾಷ್ಟ್ರದಲ್ಲಿ ಬಿಜೆಪಿಯ ಮಿತ್ರನಾಗಿರುವ ಉದ್ಧವ್ ಠಾಕ್ರೆಯವರು ವೀರ ಸಾವರ್ಕರ್ ಪ್ರಧಾನಿಯಾಗುತ್ತಿದ್ದಲ್ಲಿ‘‘ ಪಾಕಿಸ್ತಾನ ಅಸ್ತಿತ್ವಕ್ಕೆ ಬರುತ್ತಿರಲಿಲ್ಲ’’ ಎಂದು ಹೇಳಿ ತನ್ನ ಆಯ್ಕೆ ಏನೆಂಬುದನ್ನು ಸ್ಪಷ್ಟಪಡಿಸಿದರು. ಪುಸ್ತಕ ಬಿಡುಗಡೆ ಸಮಾರಂಭ ಒಂದರಲ್ಲಿ, ಸ್ವಲ್ಪ ಉದ್ರೇಕಕಾರಿ ಎನ್ನಬಹುದಾದ ಹೇಳಿಕೆಯೊಂದನ್ನು ನೀಡುತ್ತ ಅವರು ನೆಹರೂರವರನ್ನು ವೀರ್(ಧೈರ್ಯಶಾಲಿ) ಎಂದು ಕರೆಯಲು ಕೂಡ ನಿರಾಕರಿಸಿದರು:

‘‘ಹದಿನಾಲ್ಕು ವರ್ಷಗಳಷ್ಟು ಧೀರ್ಘ ಕಾಲ ಜೈಲಿನಲ್ಲಿದ್ದವರು ಡಿ ಸಾವರ್ಕರ್; ನೆಹರೂ ಹದಿನಾಲ್ಕು ನಿಮಿಷಗಳ ಕಾಲ ಜೈಲಿನಲ್ಲಿ ಇರುತ್ತಿದ್ದರೂ ನಾನು ಅವರನ್ನು ಧೈರ್ಯಶಾಲಿ ಎಂದು ಕರೆಯುತ್ತಿದ್ದೆ.’’

ನೆಹರೂರವರು ತನ್ನ ಮೂಲ ತತ್ವಗಳೊಂದಿಗೆ ರಾಜಿಮಾಡಿಕೊಳ್ಳದೆ ವಸಾಹತುಶಾಹಿಗಳ ವಿವಿಧ ಜೈಲುಗಳಲ್ಲಿ ಒಂಬತ್ತು ವರ್ಷಗಳಿಗೂ ಹೆಚ್ಚು ಕಾಲ ಜೈಲು ಶಿಕ್ಷೆ ಅನುಭವಿಸಿದ್ದರು. ಆದರೆ ಸಾವರ್ಕರ್ ಜೈಲಿನಲ್ಲಿ ಕಳೆದ 14 ವರ್ಷಗಳ ಅವಧಿಯಲ್ಲಿ ಅವರು ಬ್ರಿಟಿಷರಿಗೆ ಕಳುಹಿಸಿದ ಹಲವು ಅರ್ಜಿಗಳಲ್ಲಿ ಅವರು ‘‘ಬ್ರಿಟಿಷ್ ಸರಕಾರ ಬಯಸುವ ರೀತಿಯಲ್ಲಿ ತಾನು ಸರಕಾರಕ್ಕೆ ಸೇವೆ ಸಲ್ಲಿಸಲು ಸಿದ್ಧನಿದ್ದೇನೆ’’ ಎಂದು ಬರೆದಿದ್ದರು. ಆದರೆ ಇದು ಠಾಕ್ರೆಯವರಿಗೆ ಮುಖ್ಯ ಅನ್ನಿಸಲೇ ಇಲ್ಲ.

ಇದೊಂದು ಅವರ ಭಿನ್ನಾಭಿಪ್ರಾಯಷ್ಟೇ ಆಗಿದ್ದರೆ ನಾವು ಚಿಂತಿಸಬೇಕಾಗಿಲ್ಲ. ಆದರೆ ಅವರು(ಠಾಕ್ರೆ) ಅಲ್ಲಿ ನೆರೆದಿದ್ದ ಪ್ರೇಕ್ಷಕರನ್ನುದ್ದೇಶಿಸಿ ‘‘ಸಾವರ್ಕರ್‌ಗೆ ಅಗೌರವ ತೋರಿಸಿದ್ದಕ್ಕಾಗಿ (ಮಣಿಶಂಕರ್ ಅಯ್ಯರ್‌ರವರಿಗೆ) ಶೂಗಳಿಂದ ಹೊಡೆಯುವಂತೆ ಹೇಳಿದರು. ದ್ವಿ- ರಾಷ್ಟ್ರ ಸಿದ್ಧಾಂತವನ್ನು ಸೂಚಿಸಿದವರು ಹಾಗೂ ‘ಹಿಂದುತ್ವ’ ಶಬ್ದವನ್ನು ಟಂಕಿಸಿದವರು ಸ್ವತಃ ಸಾವರ್ಕರ್ ಅಲ್ಲದೆ ಬೇರೆ ಯಾರೂ ಅಲ್ಲ ಎಂದು ಕಳೆದ ವರ್ಷ ಸ್ವತಃ ಹಿರಿಯ ಕಾಂಗ್ರೆಸ್ ನಾಯಕ ಅಯ್ಯರ್ ಹೇಳಿದ್ದರು. ಇದರಿಂದ ಉದ್ಧವ್ ಠಾಕ್ರೆ ವಿಪರೀತ ಕೋಪಗೊಂಡಿದ್ದರು. ಅದೇನಿದ್ದರೂ, 1937ರಲ್ಲಿ ಅಹ್ಮದಾಬಾದ್‌ನಲ್ಲಿ ನಡೆದ ಹಿಂದೂ ಮಹಾಸಭಾದ 19ನೇ ಅಧಿವೇಶನದಲ್ಲಿ ತನ್ನ ಅಧ್ಯಕ್ಷೀಯ ಭಾಷಣದಲ್ಲಿ ಸಾವರ್ಕರ್ ಭಾರತದಲ್ಲಿ ಎರಡು ರಾಷ್ಟ್ರಗಳಿವೆ ಎಂದು ಘೋಷಿಸಿದ್ದರು:

‘‘ಭಾರತದಲ್ಲಿ ಅಕ್ಕಪಕ್ಕದಲ್ಲೇ ಬದುಕುವ ಎರಡು ಪರಸ್ಪರ ವಿರೋಧಿ ರಾಷ್ಟ್ರಗಳಿವೆ. ಹಲವು ಬಾಲಿಶ ರಾಜಕಾರಣಿಗಳು ಭಾರತವು ಸಾಮರಸ್ಯದ ಒಂದು ರಾಷ್ಟ್ರವಾಗಿದೆ ಎಂದು ತಿಳಿಯುವ ಗಂಭೀರವಾದ ತಪ್ಪು ಮಾಡುತ್ತಿದ್ದಾರೆ. ಆದರೆ ನಮ್ಮ ಯೋಚನಾ ರಹಿತ ಗೆಳೆಯರು ತಮ್ಮ ಕನಸುಗಳನ್ನೇ ನಿಜವೆಂದು ನಂಬಿದ್ದಾರೆ. ಆದ್ದರಿಂದ ಅವರು ಕೋಮುವಾದಿ ಅಸಹನೆ ತೋರುತ್ತಾರೆ ಹಾಗೂ ಇವುಗಳಿಗೆ ಕೋಮುವಾದಿ ಸಂಘಟನೆಗಳು ಕಾರಣ ಎನ್ನುತ್ತಾರೆ. ಆದರೆ ತಥಾ ಕಥಿತ ಕೋಮು ಪ್ರಶ್ನೆಗಳು ನಮಗೆ ಶತಮಾನಗಳಿಂದ ಮುಸ್ಲಿಮರ ಹಾಗೂ ಹಿಂದೂಗಳ ನಡುವೆ ಧಾರ್ಮಿಕ, ಸಾಂಸ್ಕೃತಿಕ ಹಾಗೂ ರಾಷ್ಟ್ರೀಯ ವಿರೋಧದಿಂದಾಗಿ ಬಂದಿರುವ ಬಳುವಳಿಯಾಗಿದೆ... ಇವತ್ತು ಭಾರತವನ್ನು ಒಂದು ಏಕರೂಪದ ಯುನಿಟೇರಿಯನ್ ರಾಷ್ಟ್ರವೆಂದು ಪರಿಗಣಿಸುವಂತಿಲ್ಲ; ಇದಕ್ಕೆ ವ್ಯತಿರಿಕ್ತವಾಗಿ ದೇಶದಲ್ಲಿ ಮುಖ್ಯವಾಗಿ ಎರಡು ರಾಷ್ಟ್ರಗಳಿವೆ: ಹಿಂದೂಗಳು ಮತ್ತು ಮುಸಲ್ಮಾನರು.’’

(ವಿ.ಡಿ. ಸಾವರ್ಕರ್, ಸಮಗ್ರ ಸಾವರ್ಕರ್ ವಾಗ್ಮಯ ಹಿಂದೂ ರಾಷ್ಟ್ರ ದರ್ಶನ, ಕಲೆಕ್ಟೆಡ್ ವರ್ಕ್ ಆಫ್ ವಿ.ಡಿ. ಸಾವರ್ಕರ್, ಸಂಪುಟ 6, ಮಹಾರಾಷ್ಟ್ರ ಪ್ರಾಂತಿಕ್ ಹಿಂದೂ ಸಭಾ, ಪೂನಾ, 1963 ಪು.296)

ಒಂದು ವರ್ಷದ ಬಳಿಕ ಅವರು ಹೇಳಿದರು: ‘‘ಭಾರತದಲ್ಲಿ ಹಿಂದೂಗಳೇ ರಾಷ್ಟ್ರ- ಹಿಂದೂಸ್ಥಾನದಲ್ಲಿ, ಮುಸ್ಲಿಂ ಮೈನಾರಿಟಿ ಒಂದು ಸಮುದಾಯ’’

(ಪುಟ 25, ಸಾವರ್ಕರ್ ಆ್ಯಂಡ್ ಹಿಂದುತ್ವ, ಎ.ಜಿ. ನೂರಾನಿ, ಲೆಫ್ಟ್‌ವರ್ಡ್, 2003). ಜಿನ್ನಾರವರು ತನ್ನ ದ್ವಿ- ರಾಷ್ಟ್ರ ಸಿದ್ಧಾಂತವನ್ನು 1939ರಲ್ಲಿ ಪ್ರತಿಪಾದಿಸಿದರು; ಸಾವರ್ಕರ್ ಈ ಸಿದ್ಧಾಂತವನ್ನು ಪ್ರತಿಪಾದಿಸಿದ ಸರಿಯಾಗಿ ಎರಡು ವರ್ಷಗಳ ಬಳಿಕ ಎಂಬುದನ್ನು ಮರೆಯಬೇಡಿ. ಸಂಘ ಪರಿವಾರದ ಪರವಾದ ಅಭಿಪ್ರಾಯಗಳನ್ನು ಹೊಂದಿದ್ದ ಓರ್ವ ಇತಿಹಾಸಕಾರರಾಗಿದ್ದ ಆರ್.ಸಿ. ಮಜುಮ್‌ದಾರ್‌ರವರ ಪ್ರಕಾರ ‘‘ ಕೋಮು ನೆಲೆಯಲ್ಲಿ ಭಾರತದ ವಿಭಜನೆಗೆ ಒಂದು ಮುಖ್ಯ ಅಂಶ ಕಾರಣವಾಗಿತ್ತು. ಆ ಅಂಶವೇ ಹಿಂದೂ ಮಹಾ ಸಭಾ’’ (ಆರ್.ಸಿ. ಮಜುಮ್‌ದಾರ್,(ಜನರಲ್ ಎಡಿಟರ್), ಸ್ಟ್ರಗಲ್ ಫಾರ್ ಫ್ರೀಡಂ, ಭಾರತೀಯ ವಿದ್ಯಾ ಭವನ್, ಮುಂಬೈ, 1969, ಪುಟ 611).

ಅವರು ಹೀಗೆ ಬರೆಯಲು ಅಂದಿನ ರಾಜಕೀಯ ವಾತಾವರಣ ಕಾರಣವಾಗಿತ್ತು.

ಚುನಾವಣೆಗಳು ಸಮೀಪಿಸುತ್ತಿರುವಾಗ ಶಿವ ಸೇನೆಯ ಮುಖ್ಯಸ್ಥ (ಠಾಕ್ರೆ) ಸಾವರ್ಕರ್‌ರನ್ನು ಹೀಗೆ ಹಾಡಿ ಹೊಗಳಿರುವುದು ಸ್ವಯಂ ಸ್ಫೂರ್ತಿಯಿಂದ ಎಂದು ಭಾವಿಸುವುದು ಪೆದ್ದುತನವಾಗುತ್ತದೆ. ಬದಲಾಗಿ, ಒಂದಷ್ಟು ಮತ ಗಳನ್ನು ಬಾಚಿಕೊಳ್ಳುವ ಉದ್ದೇಶದಿಂದ ಭಾವನಾತ್ಮಕ ವಿಷಯವೊಂದನ್ನು ಎತ್ತುವ ಒಂದು ಪ್ರಯತ್ನ ಇದು. ಅಲ್ಲದ, ಇದಕ್ಕೆ ಇನ್ನೂ ಒಂದು ಉದ್ದೇಶವಿದೆ: ಬಿಜೆಪಿ ಓರ್ವ ಗುಜರಾತಿಯಾಗಿರುವ ಸರ್ದಾರ್ ಪಟೇಲರ ಹೆಸರನ್ನು ತನ್ನ ನೆಹರೂವಿರೋಧಿ ಪ್ರಚಾರಕ್ಕಾಗಿ ಬಳಸಿದೆ. ಇದಕ್ಕೆ ಪ್ರತಿಯಾಗಿ, ಓರ್ವ ಮರಾಠಿ ನಾಯಕನನ್ನು ಬಳಸಿಕೊಂಡು ತನ್ನ ‘ಹಿರಿಯ ಮಿತ್ರಪಕ್ಷ’ವಾಗಿರುವ ಬಿಜೆಪಿಗೆ ಇದಿರೇಟು ನೀಡುವುದು ಠಾಕ್ರೆಯವರ ತಂತ್ರವಾಗಿದೆ. ಸಾವರ್ಕರ್ ಬಗ್ಗೆ ಬಿಜೆಪಿಯ ‘‘ಪ್ರೀತಿ’’ ತೀರಾ ಇತ್ತೀಚಿನ ಸಂಗತಿ ಎಂಬುದು ಕೂಡ ಇದರಿಂದ ತಿಳಿಯುತ್ತದೆ.

2004ರಲ್ಲಿ ಪೋರ್ಟ್ ಬ್ಲೇರ್‌ನ ಸೆಲ್ಯೂಲರ್ ಜೈಲಿನಿಂದ ಸಾವರ್ಕರ್‌ರವರ ಭಿತ್ತಿಫಲಕವನ್ನು ತೆಗೆಯಲಾಯಿತು ಎಂಬುದನ್ನು ನಾವು ಮರೆಯಕೂಡದು. ಆ ಜೈಲಿನಲ್ಲಿ ಸಾವರ್ಕರ್ ತನ್ನ ಜೈಲು ಶಿಕ್ಷೆ ಅನುಭವಿಸಿದ್ದರು. ಸಾವರ್ಕರ್‌ರವರ ಸಂಬಂಧಿಕ ವಿಕ್ರಮ್ ಸಾವರ್ಕರ್ ಬಿಜೆಪಿಗೆ ತನ್ನ ಚಿಕ್ಕಪ್ಪನಲ್ಲಿ ಆಸಕ್ತಿ ಇಲ್ಲವೆಂಬುದನ್ನು ಬಹಿರಂಗ ಪಡಿಸಿದ್ದರು.

 ಕೃಪೆ: countercurrents.org

Writer - ಸುಭಾಷ್ ಗಟಾಡೆ

contributor

Editor - ಸುಭಾಷ್ ಗಟಾಡೆ

contributor

Similar News

ಜಗದಗಲ
ಜಗ ದಗಲ