×
Ad

ಇ-ಸಿಗರೇಟ್ ರಫ್ತು ನಿಷೇಧ: ಕೇಂದ್ರ

Update: 2019-09-30 21:36 IST

ಹೊಸದಿಲ್ಲಿ, ಸೆ.30: ಇ-ಸಿಗರೇಟ್, ಇ-ಹುಕ್ಕ ಹಾಗೂ ಇದೇ ಮಾದರಿಯ ಇತರ ಸಾಧನಗಳ ರಫ್ತಿನ ಮೇಲೆ ನಿಷೇಧ ಹೇರಲಾಗಿದೆ ಎಂದು ವಾಣಿಜ್ಯ ಸಚಿವಾಲಯ ಸೋಮವಾರ ತಿಳಿಸಿದೆ.

 ಇ-ಸಿಗರೇಟ್‌ಗಳ ತಯಾರಿಕೆ, ಆಮದು, ಹಂಚಿಕೆ ಮತ್ತು ಮಾರಾಟದ ಮೇಲೆ ಕೇಂದ್ರ ಸರಕಾರ ಸೆಪ್ಟಂಬರ್ 18ರಂದು ವಿಧಿಸಿದ ನಿಷೇಧದ ಹಿನ್ನೆಲೆಯಲ್ಲಿ ಈ ಅಧಿಸೂಚನೆಯನ್ನು ಹೊರಡಿಸಲಾಗಿದೆ ಎಂದು ಸಚಿವಾಲಯದ ಪ್ರಕಟನೆ ತಿಳಿಸಿದೆ.

ಇ-ಸಿಗರೇಟ್, ಇ-ಹುಕ್ಕ ಹಾಗೂ ಇತರ ಹೆಸರುಗಳು, ಗಾತ್ರ, ಆಕಾರ ಅಥವಾ ರೂಪದಲ್ಲಿರುವ ಇದೇ ಮಾದರಿಯ ಇತರ ಸಾಧನಗಳ ರಫ್ತಿನ ಮೇಲೆ ನಿಷೇಧ ಹೇರಲಾಗಿದೆ ಎಂದು ವಿದೇಶ ವ್ಯಾಪಾರ ಪ್ರಧಾನ ನಿರ್ದೇಶನಾಲಯ (ಡಿಜಿಎಫ್‌ಟಿ) ತಿಳಿಸಿದೆ.

ಆದರೆ ಈ ನಿಷೇಧವು, 1940ರ ಉದ್ದೀಪನ ಮತ್ತು ಸೌಂದರ್ಯವರ್ಧಕ ಕಾಯ್ದೆಯಡಿ ಪರವಾನಿಗೆ ಹೊಂದಿರುವ ವಸ್ತುಗಳಿಗೆ ಅನ್ವಯವಾಗುವುದಿಲ್ಲ ಎಂದು ಅದು ಸ್ಪಷ್ಟಪಡಿಸಿದೆ. ಈ ಆದೇಶವನ್ನು ಮೊದಲ ಬಾರಿ ಉಲ್ಲಂಘಿಸಿದರೆ ಒಂದು ವರ್ಷದ ಜೈಲು ಮತ್ತು ಒಂದು ಲಕ್ಷ ದಂಡ ತೆರಬೇಕಾಗುತ್ತದೆ. ಉಲ್ಲಂಘನೆ ಮರುಕಳಿಸಿದರೆ ಮೂರು ವರ್ಷಗಳವರೆಗೆ ಜೈಲುಶಿಕ್ಷೆ ಅಥವಾ 5 ಲಕ್ಷ ರೂ. ದಂಡ ಅಥವಾ ಎರಡನ್ನೂ ತೆರಬೇಕಾಗಬಹುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News