ಇರಾಕ್: ಸರಕಾರ ವಿರೋಧಿ ಪ್ರತಿಭಟನೆ; 18 ಸಾವು

Update: 2019-10-03 17:10 GMT

ಬಗ್ದಾದ್, ಅ. 3: ದಕ್ಷಿಣ ಇರಾಕ್‌ನ ಎರಡು ನಗರಗಳಲ್ಲಿ ಬುಧವಾರ ರಾತ್ರಿ ನಡೆದ ಪ್ರತಿಭಟನೆಗಳ ವೇಳೆ ಓರ್ವ ಪೊಲೀಸ್ ಸೇರಿದಂತೆ 11 ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮತ್ತು ವೈದ್ಯಕೀಯ ಮೂಲಗಳು ಗುರುವಾರ ತಿಳಿಸಿವೆ.

ಎರಡು ದಿನಗಳಿಂದ ನಡೆಯುತ್ತಿರುವ ಹಿಂಸಾತ್ಮಕ ಸರಕಾರ ವಿರೋಧಿ ಪ್ರತಿಭಟನೆಗಳಲ್ಲಿ ಮೃತಪಟ್ಟವರ ಸಂಖ್ಯೆ 18ಕ್ಕೆ ಏರಿದೆ.

ನಸ್ಸಿರಿಯದಲ್ಲಿ ಪ್ರತಿಭಟನಕಾರರು ಮತ್ತು ಪೊಲೀಸರ ನಡುವೆ ನಡೆದ ಸಂಘರ್ಷದಲ್ಲಿ 7 ಪ್ರತಿಭಟನಕಾರರು ಮತ್ತು ಓರ್ವ ಪೊಲೀಸ್ ಹತರಾಗಿದ್ದಾರೆ.

ಅಮರ ನಗರದಲ್ಲಿ ನಡೆದ ಪ್ರತಿಭಟನೆಯಲ್ಲಿ ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ.

ನಿರುದ್ಯೋಗ, ಭ್ರಷ್ಟಾಚಾರ ಹಾಗೂ ಸರಕಾರದ ಇತರ ವೈಫಲ್ಯಗಳನ್ನು ಪ್ರತಿಭಟಿಸಿ ಬಗ್ದಾದ್‌ನಲ್ಲಿ ಮಂಗಳವಾರ ಆರಂಭವಾದ ಸಣ್ಣ ಮಟ್ಟದ ಪ್ರತಿಭಟನೆ ಬಳಿಕ ವ್ಯಾಪಕವಾಗಿ ಹರಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News