ಇಂಡೋನೇಶ್ಯ, ಯುಎಇ, ನೈಜೀರಿಯ, ಈಜಿಪ್ಟ್‌ಗಳ ನೂರಾರು ನಕಲಿ ಖಾತೆಗೆ ಕತ್ತರಿ: ಫೇಸ್‌ಬುಕ್ ಹೇಳಿಕೆ

Update: 2019-10-04 17:30 GMT

ಸಾನ್‌ಫ್ರಾನ್ಸಿಸ್ಕೊ, ಅ. 4: ಇಂಡೋನೇಶ್ಯ, ಯುನೈಟೆಡ್ ಅರಬ್ ಎಮಿರೇಟ್ಸ್, ಈಜಿಪ್ಟ್ ಮತ್ತು ನೈಜೀರಿಯಗಳಲ್ಲಿನ ಮೂರು ಘಟನೆಗಳಿಗೆ ಸಂಬಂಧಿಸಿ, ‘ಸಮನ್ವಯಿತ ನಕಲಿ ವರ್ತನೆ’ಗಾಗಿ ನಮ್ಮ ವೇದಿಕೆಗಳಲ್ಲಿರುವ ನೂರಾರು ಪುಟಗಳು, ಗ್ರೂಪ್‌ಗಳು ಮತ್ತು ಖಾತೆಗಳನ್ನು ತೆಗೆದುಹಾಕಲಾಗಿದೆ ಎಂದು ಫೇಸ್‌ಬುಕ್ ಇಂಕ್ ಪ್ರಕಟಿಸಿದೆ.

ಇಂಡೋನೇಶ್ಯದ ಪಶ್ಚಿಮ ಪಪುವ ಸ್ವಾತಂತ್ರ ಚಳವಳಿಯನ್ನು ಟೀಕಿಸುವ ಅಥವಾ ಬೆಂಬಲಿಸುವ ಇಂಗ್ಲಿಷ್ ಮತ್ತು ಇಂಡೋನೇಶ್ಯ ಭಾಷೆಯ ಸಂದೇಶಗಳನ್ನು ಹರಡುತ್ತಿರುವ 100ಕ್ಕೂ ಅಧಿಕ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ಖಾತೆಗಳನ್ನು ತೆಗೆಯಲಾಗಿದೆ.

ಮಧ್ಯಪ್ರಾಚ್ಯ ಮತ್ತು ಆಫ್ರಿಕಗಳ ಇನ್ನೆರಡು ಘಟನೆಗಳಿಗೆ ಸಂಬಂಧಿಸಿ ಹಲವು ನಕಲಿ ಖಾತೆಗಳನ್ನು ತೆಗೆದುಹಾಕಲಾಗಿದೆ ಎಂದು ಫೇಸ್‌ಬುಕ್ ಅಧಿಕಾರಿ ಡೇವಿಡ್ ಆಗ್ರನೊವಿಚ್ ತಿಳಿಸಿದರು.

ಅದರಲ್ಲಿ ಒಂದು ಸುಳ್ಳು ಸುದ್ದಿ ಜಾಲವು ಈಜಿಪ್ಟ್‌ನಲ್ಲಿ ಕಾರ್ಯಾಚರಿಸುತ್ತಿದ್ದು, ಯುನೈಟೆಡ್ ಅರಬ್ ಎಮಿರೇಟ್ಸ್, ಸೌದಿ ಅರೇಬಿಯ ಮತ್ತು ಈಜಿಪ್ಟ್ ಪರವಾಗಿ ಹಾಗೂ ಖತರ್, ಇರಾನ್, ಟರ್ಕಿ ಮತ್ತು ಯೆಮನ್‌ನ ಹೌದಿ ಬಂಡುಕೋರರ ವಿರುದ್ಧವಾಗಿ ಸಂದೇಶಗಳನ್ನು ಬಿತ್ತರಿಸುತ್ತಿತ್ತು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News