ಪರಮಾಣು ವಿವಾದ: ಇರಾನ್ ಸರಿಯಾದ ದಿಕ್ಕಿನಲ್ಲಿ ಹೆಜ್ಜೆ ಇಟ್ಟಿದೆ ಎಂದ ಅಂತರ್‌ರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ

Update: 2019-10-04 17:50 GMT

ವಿಯೆನ್ನಾ, ಅ. 4: ತನ್ನ ಪರಮಾಣು ಕಾರ್ಯಕ್ರಮದ ಬಗ್ಗೆ ಎದ್ದಿರುವ ಪ್ರಶ್ನೆಗಳಿಗೆ ನಿಟ್ಟಿನಲ್ಲಿ ಇರಾನ್ ಸರಿಯಾದ ದಿಕ್ಕಿನಲ್ಲಿ ಹೆಜ್ಜೆಯೊಂದನ್ನು ಇಟ್ಟಿದೆ ಎಂದು ವಿಶ್ವಸಂಸ್ಥೆಯ ಪರಮಾಣು ನಿಗಾ ಸಂಸ್ಥೆ ಅಂತರ್‌ರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ (ಐಎಇಎ) ಶುಕ್ರವಾರ ಹೇಳಿದೆ. ಆದರೆ, ಸಂದೇಹಗಳನ್ನು ‘ಸಂಪೂರ್ಣವಾಗಿ ಪರಿಹರಿಸಲಾಗಿಲ್ಲ’ ಎಂಬುದಾಗಿಯೂ ಅದು ಎಚ್ಚರಿಸಿದೆ.

ಐಎಇಎಗೆ ಇರಾನ್ ನೀಡಿರುವ ಪರಮಾಣು ಸುರಕ್ಷಾ ಕ್ರಮಗಳ ಘೋಷಣೆಗೆ ಸಂಬಂಧಿಸಿ ಎದ್ದಿರುವ ಪ್ರಶ್ನೆಗಳ ಬಗ್ಗೆ ಇರಾನ್ ಕಳೆದ ಕೆಲವು ವಾರಗಳಿಂದ ಕೆಲಸ ಮಾಡುತ್ತಿದೆ ಎಂದು ಐಎಇಎ ಉಸ್ತುವಾರಿ ಮುಖ್ಯಸ್ಥ ಕಾರ್ನೆಲ್ ಫೆರುಟ ವಿಯೆನ್ನಾದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

‘‘ಸಂಶಯಗಳನ್ನು ನಿವಾರಿಸುವ ನಿಟ್ಟಿನಲ್ಲಿ ಅದು ಕೆಲಸ ಮಾಡುತ್ತಿದೆ ಹೌದು. ಆದರೆ ಅದರ ಅರ್ಥ ಎಲ್ಲ ಸಂಶಯಗಳು ನಿವಾರಣೆಯಾಗಿದೆ ಎಂದಲ್ಲ. ಆದರೆ, ಅದು ಸರಿಯಾದ ದಿಕ್ಕಿನಲ್ಲಿ ಇಟ್ಟ ಹೆಜ್ಜೆಯಾಗಿದೆ’’ ಎಂದು ಅವರು ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News