ಅರ್ಹತಾ ಸುತ್ತಿನಲ್ಲಿ ತೇಜಿಂದರ್ ಪಾಲ್, ಜಾನ್ಸನ್ ಗೆ ಸೋಲು

Update: 2019-10-05 02:24 GMT

ದೋಹಾ, ಅ.4: ಭಾರತದ ಏಶ್ಯನ್ ಗೇಮ್ಸ್ ಚಾಂಪಿಯನ್‌ಗಳಾದ ಶಾಟ್‌ಪುಟ್ ಪಟು ತೇಜಿಂದರ್ ಪಾಲ್ ಸಿಂಗ್ ತೂರ್ ಹಾಗೂ 1,500 ಮೀ. ರನ್ನರ್ ಜಿನ್ಸನ್ ಜಾನ್ಸನ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಗುರುವಾರ ನಡೆದ ಅರ್ಹತಾ ಸುತ್ತಿನಲ್ಲಿ ಸೋಲನುಭವಿಸಿ ಟೂರ್ನಿಯಿಂದ ಹೊರ ನಡೆದರು.

 ‘ಬಿ‘ ಗುಂಪಿನ ಅರ್ಹತಾ ಸುತ್ತಿನಲ್ಲಿ 24ರ ಹರೆಯದ ತೇಜಿಂದರ್ ಪಾಲ್ 20.43 ಮೀ.ದೂರಕ್ಕೆ ಡಿಸ್ಕಸ್ ಎಸೆಯುವ ಮೂಲಕ 8ನೇ ಸ್ಥಾನ ಪಡೆದರು. 34 ಸ್ಪರ್ಧಿಗಳ ಪೈಕಿ 18ನೇ ಸ್ಥಾನ ಪಡೆದರು. ಜಿನ್ಸನ್ 3 ನಿಮಿಷ, 39.86 ಸೆಕೆಂಡ್‌ನಲ್ಲಿ ಗುರಿ ತಲುಪಿ ಮೊದಲ ಸುತ್ತಿನ ಹೀಟ್ಸ್‌ನಲ್ಲಿ 10ನೇ ಹಾಗೂ 43 ರನ್ನರ್‌ಗಳ ಪೈಕಿ 34ನೇ ಸ್ಥಾನ ಪಡೆದರು. ಎ ಗುಂಪಿನಲ್ಲಿ 8 ಶಾಟ್‌ಪುಟ್ ಪಟುಗಳು ಅರ್ಹತಾ ಮಾರ್ಕ್‌ನ್ನು(20.90 ಮೀ.)ತಲುಪಿ ಅಂತಿಮ ಸುತ್ತಿಗೆ ತಲುಪಿದ್ದರು. ಹೀಗಾಗಿ ತೇಜಿಂದರ್ ಮೊದಲಿಗನಾಗಿ ಮೈದಾನಕ್ಕೆ ಇಳಿದರು. ಈ ಹಿಂದೆ 20.75 ಮೀ.ದೂರಕ್ಕೆ ಶಾಟ್‌ಪುಟ್ ಎಸೆದು ವೈಯಕ್ತಿಕ ಶ್ರೇಷ್ಠ ಸಾಧನೆಯೊಂದಿಗೆ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದ ತೇಜಿಂದರ್‌ಗೆ 20.90 ಮೀ.ದೂರಕ್ಕೆ ಡಿಸ್ಕಸ್ ಎಸೆಯುವುದು ಕಠಿಣವಾಗಿ ಪರಿಗಣಿಸಿತು.

 ಮೊದಲ ಸುತ್ತಿನಲ್ಲಿ 20.43 ಮೀ.ದೂರಕ್ಕೆ ಡಿಸ್ಕಸ್‌ನ್ನು ಎಸೆದಿದ್ದರು. ಮುಂದಿನ ಪ್ರಯತ್ನದಲ್ಲಿ ವಿಫಲರಾದರು. ‘ಬಿ’ ಗುಂಪಿನ ಮೂವರು ಸ್ಪರ್ಧಿಗಳು ಮೊದಲ ಪ್ರಯತ್ನದಲ್ಲಿ ಅರ್ಹತಾ ಮಾರ್ಕನ್ನು ತಲುಪಿದಾಗ ತೇಜಿಂದರ್‌ಗೆ ಒತ್ತಡ ಹೆಚ್ಚಾಯಿತು. ತೇಜಿಂದರ್‌ಗೆ ಫೈನಲ್‌ಗೆ ಅರ್ಹತೆ ಪಡೆಯಲು 20.90 ಮೀ.ದೂರಕ್ಕೆ ಡಿಸ್ಕಸ್‌ನ್ನು ಎಸೆದು ತನ್ನದೇ ರಾಷ್ಟ್ರೀಯ ದಾಖಲೆ ಉತ್ತಮಪಡಿಸಬೇಕಾದ ಒತ್ತಡ ಎದುರಾಯಿತು. 20.90 ಮೀ. ದೂರಕ್ಕೆ ಡಿಸ್ಕಸ್ ಎಸೆಯಬಲ್ಲ ಅಥವಾ ಅಗ್ರ 12 ಸ್ಪರ್ಧಾಳುಗಳು ಫೈನಲ್‌ಗೆ ಅರ್ಹತೆ ಪಡೆಯುತ್ತಾರೆ. ‘ಎ’ ಹಾಗೂ ‘ಬಿ’ ಗುಂಪಿನ 12 ಶಾಟ್‌ಪುಟ್‌ಗಳು ಅರ್ಹತಾ ಸುತ್ತಿನ ಮಾರ್ಕನ್ನು ತಲುಪಲು ಶಕ್ತರಾದರು.

ಹಾಲಿ ವಿಶ್ವ ಚಾಂಪಿಯನ್ ಹಾಗೂ 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತ ನ್ಯೂಝಿಲ್ಯಾಂಡ್‌ನ ಥಾಮಸ್ ವಾಲ್ಶ್ 21.92 ಮೀ. ದೂರಕ್ಕೆ ಡಿಸ್ಕಸ್‌ನ್ನು ಎಸೆದು ಫೈನಲ್ ಪ್ರವೇಶಿಸಿದ ಮೊದಲಿಗ ಎನಿಸಿಕೊಂಡರು. ಜಕಾರ್ತದಲ್ಲಿ ನಡೆದಿದ್ದ ಏಶ್ಯನ್ ಗೇಮ್ಸ್ ನಲ್ಲಿ ರಾಷ್ಟ್ರೀಯ ದಾಖಲೆ(20.75 ಮೀ.)ಯೊಂದಿಗೆ ಚಿನ್ನದ ಪದಕ ಜಯಿಸಿದ್ದ ತೇಜಿಂದರ್ ಎಪ್ರಿಲ್‌ನಲ್ಲಿ ದೋಹಾದಲ್ಲಿ ನಡೆದಿದ್ದ ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ 20.22 ಮೀ. ದೂರಕ್ಕೆ ಡಿಸ್ಕಸ್ ಎಸೆದು ಚಿನ್ನದ ಪದಕ ಜಯಿಸಿದ್ದರು.

28ರ ಹರೆಯದ ಜಿನ್ಸನ್ ಪಾಲಿಗೆ ಗುರುವಾರ ನಿರಾಸೆಯ ದಿನವಾಗಿ ಪರಿಣಮಿಸಿತು. ಕಳೆದ ತಿಂಗಳು 3:35.24 ಸೆಕೆಂಡ್‌ನಲ್ಲಿ ಗುರಿ ತಲುಪಿ ತನ್ನದೇ ರಾಷ್ಟ್ರೀಯ ದಾಖಲೆ ಮುರಿದಿದ್ದ ಜಾನ್ಸನ್ ಫೈನ್ ಸುತ್ತಿಗೆ ತಲುಪಲು ವಿಫಲರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News