ಇಬ್ಬರು ಬಾಲಕರ ವಿರುದ್ಧದ ಪಿಎಸ್‌ಎ ಕಾಯ್ದೆ ಹಿಂದೆಗೆದ ಜಮ್ಮು ಕಾಶ್ಮೀರ ಸರಕಾರ
Update: 2019-10-05 22:53 IST
ಜಮ್ಮು,ಅ.5: ಇಬ್ಬರು ಅಪ್ರಾಪ್ತ ವಯಸ್ಕರ ವಿರುದ್ಧ ಹೇರಲಾಗಿದ್ದ ಸಾರ್ವಜನಿಕ ಸುರಕ್ಷತಾ ಕಾಯ್ದೆ (ಪಿಎಸ್‌ಎ)ಯನ್ನು ಹಿಂದೆಗೆದುಕೊಂಡಿರುವುದಾಗಿ ಜಮ್ಮು-ಕಾಶ್ಮೀರ ಸರಕಾರವು ಉಚ್ಚ ನ್ಯಾಯಾಲಯಕ್ಕೆ ತಿಳಿಸಿದೆ.
ಬಾರಾಮುಲ್ಲಾ ಮತ್ತು ಶ್ರೀನಗರಕ್ಕೆ ಸೇರಿದ ಈ ಬಾಲಕರ ಕುಟುಂಬಗಳು ನ್ಯಾಯಾಲಯಕ್ಕೆ ಹೇಬಿಯಸ್ ಕಾರ್ಪಸ್ ಅರ್ಜಿಗಳನ್ನು ಸಲ್ಲಿಸಿದ್ದವು. ಸರಕಾರದ ಹೇಳಿಕೆಯ ಬಳಿಕ ನ್ಯಾ.ಅಲಿ ಮುಹಮ್ಮದ್ ಮ್ಯಾಗ್ರೆ ಅವರು ಈ ಅರ್ಜಿಗಳನ್ನು ವಿಲೇವಾರಿಗೊಳಿಸಿದರು. ಈ ಮೊದಲು ನಾಲ್ವರು ಬಾಲಕರ ಕುಟುಂಬಗಳು ಅವರ ವಿರುದ್ಧ ಪಿಎಸ್‌ಎ ಹೇರಿರುವುದನ್ನು ಪ್ರಶ್ನಿಸಿ ಉಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದ್ದವು. ಸರಕಾರವು ಈ ಪೈಕಿ ಮೂವರ ವಿರುದ್ಧದ ಪಿಎಸ್‌ಎ ಅನ್ನು ಹಿಂದೆಗೆದುಕೊಂಡಿದೆ.