×
Ad

ರಾಹುಲ್ ಬೆಳೆಸಿದ್ದ ಯುವನಾಯಕರನ್ನು ಮುಗಿಸಲು ಕಾಂಗ್ರೆಸ್ ನಲ್ಲಿ ಸಂಚು: ಪಕ್ಷ ತೊರೆದ ತನ್ವರ್

Update: 2019-10-05 23:09 IST

ಹೊಸದಿಲ್ಲಿ, ಅ.5: ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಬೆಳೆಸಿರುವ ಯುವನಾಯಕರನ್ನು ನಿವಾರಿಸಲು ಸಂಚು ನಡೆಯುತ್ತಿದೆ ಎಂದು ಶನಿವಾರ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿರುವ ಮಾಜಿ ಹರ್ಯಾಣ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ತನ್ವರ್ ಅರೋಪಿಸಿದ್ದಾರೆ.

“ದುರದೃಷ್ಟವಶಾತ್ ಈ ಸಂಚಿನ ಹೆಚ್ಚಿನ ಬಲಿಪಶುಗಳಿಗೆ ಅದರ ವಿರುದ್ಧ ನಿಲ್ಲುವ ಧೈರ್ಯವಿರಲಿಲ್ಲ. ಆದರೆ ಯುವ ನಾಯಕರ ಮೇಲಿನ ಇಂತಹ ದಾಳಿಯನ್ನು ಪ್ರತಿರೋಧಿಸಿ ಸಂಚನ್ನು ಬಯಲಿಗೆಳೆಯುವುದು ತನ್ನ ನೈತಿಕ ಮತ್ತು ರಾಜಕೀಯ ಕರ್ತವ್ಯವಾಗಿದೆ “ಎಂದು ತನ್ವರ್ ಟ್ವಿಟರ್‌ನಲ್ಲಿ ಶೇರ್ ಮಾಡಿಕೊಂಡಿರುವ ತನ್ನ ರಾಜೀನಾಮೆ ಪತ್ರದಲ್ಲಿ ಹೇಳಿದ್ದಾರೆ.

ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಝಾದ್ ಅವರು ‘ಕೊಳಕು ಆಟವಾಡುತ್ತಿದ್ದಾರೆ ’ಎಂದು ಆರೋಪಿಸಿರುವ ಅವರು,ಆಝಾದ್ ತನ್ನ ಸ್ನೇಹಿತರ ಶಕ್ತಿಗೆ ಸಂಪೂರ್ಣ ಶರಣಾಗಿ ತನಗೆ ಹೈಕಮಾಂಡ್ ಹರ್ಯಾಣದಲ್ಲಿ ವಹಿಸಿದ್ದ ಜವಾಬ್ದಾರಿಯನ್ನು ಮಾರಿಕೊಂಡಿದ್ದಾರೆ ಎಂದು ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News