ತನ್ನದೇ ವಿಶ್ವದಾಖಲೆ ಮುರಿದು ಮಹಿಳೆಯರ 400 ಮೀ. ಹರ್ಡಲ್ಸ್‌ ಪ್ರಶಸ್ತಿ ಜಯಿಸಿದ ದಲೀಲಾ ಮುಹಮ್ಮದ್

Update: 2019-10-05 18:04 GMT

ದೋಹಾ, ಅ.5: ಅಮೆರಿಕದ ದಲೀಲಾ ಮುಹಮ್ಮದ್ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಮಹಿಳೆಯರ 400 ಮೀ. ಹರ್ಡಲ್ಸ್‌ನಲ್ಲಿ ತನ್ನದೇ ವಿಶ್ವ ದಾಖಲೆಯನ್ನು ಮುರಿದು ಪ್ರಶಸ್ತಿ ಎತ್ತಿ ಹಿಡಿದರು. ಶುಕ್ರವಾರ ನಡೆದ ಫೈನಲ್ ಸ್ಪರ್ಧೆಯಲ್ಲಿ 52.16 ಸೆಕೆಂಡ್‌ನಲ್ಲಿ ಗುರಿ ತಲುಪಿದ ಮುಹಮ್ಮದ್ ಸಹ ಓಟಗಾರ್ತಿ ಸಿಡ್ನಿ ಮೆಕ್‌ಲಾಫ್‌ಲಿನ್ ರನ್ನು ಹಿಂದಿಕ್ಕಿದರು.

2016ರ ಒಲಿಂಪಿಕ್ಸ್ ಚಾಂಪಿಯನ್ ಮುಹಮ್ಮದ್ ಜುಲೈನಲ್ಲಿ ತಾನೇ ನಿರ್ಮಿಸಿದ್ದ ವಿಶ್ವ ದಾಖಲೆಯ ಸಮಯಕ್ಕಿಂತ 0.04 ಸೆಕೆಂಡ್‌ಗಿಂತ ಮೊದಲು ಗುರಿ ತಲುಪಿದರು.

ಅಮೆರಿಕದ ಓಟಗಾರ್ತಿಯ ಸಾಮರ್ಥ್ಯಕ್ಕೆ ಅವರ ಎರಡು ವಿಶ್ವ ದಾಖಲೆಯು ಸಾಕ್ಷಿಯಾಗಿದ್ದು, ಮುಂದಿನ ವರ್ಷ ಟೋಕಿಯೊದಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಪ್ರಶಸ್ತಿ ಉಳಿಸಿಕೊಳ್ಳುವತ್ತ ಚಿತ್ತಹರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News