344 ವರ್ಷ ಪ್ರಾಯದ ಆಮೆ ಮೃತ್ಯು

Update: 2019-10-06 17:35 GMT

ಲಾಗೋಸ್ (ನೈಜೀರಿಯ), ಅ.6: ವಾಯುವ್ಯ ನೈಜೀರಿಯದ ಓಗ್‌ಬೊ ಮೊಶೋದ ಬುಡಕಟ್ಟು ದೊರೆಯೊಬ್ಬನ ಅರಮನೆಯಲ್ಲಿ ಸಾಕಲಾಗುತ್ತಿದ್ದ 344 ವರ್ಷ ಪ್ರಾಯದ್ದೆನ್ನಲಾದ ಆಮೆಯೊಂದು ಕೊನೆಯುಸಿರೆಳೆದಿರುವುದಾಗಿ ವಕ್ತಾರರೊಬ್ಬರು ತಿಳಿಸಿದ್ದಾರೆ.

ಅಲಗ್ಬಾ ಎಂಬ ಹೆಸರಿನ ಈ ಆಮೆಗೆ 344 ವಯಸ್ಸಾಗಿರುವ ಬಗ್ಗೆ ಪ್ರಾಣಿ ತಜ್ಞರು ಸಂದೇಹ ವ್ಯಕ್ತಪಡಿಸಿರುವರಾದರೂ, ರಾಜಮನೆತನದ ಮೂಲಗಳು ಈ ಆಮೆಯು ಅರಮನೆಯಲ್ಲಿ 2 ಶತಮಾನಗಳಿಗೂ ಹೆಚ್ಚು ಸಮಯದಿಂದ ವಾಸಿಸುತ್ತಿದ್ದುದಾಗಿ ತಿಳಿಸಿದ್ದಾರೆ.

ಈ ಆಮೆಯು ಆಫ್ರಿಕ ಖಂಡದಲ್ಲೇ ಅತ್ಯತ ಹಿರಿಯ ವಯಸ್ಸಿನ ಜೀವಿಯೆಂದು ದೊರೆ ಜಿಮೊಹ್ ಓಯೆವುನ್ಮಿ ಅವರ ಖಾಸಗಿ ಸಹಾಯಕ ಟೊಯಿನ್ ಅಜಾಮು ತಿಳಿಸಿದ್ದಾರೆ. ಈ ಆಮೆಯನ್ನು ಒಂದೆರಡು ಶತಮಾನಗಳ ಹಿಂದೆ, ಪಟ್ಟಣದ ಮೂರನೆ ಬುಡಕಟ್ಟು ದೊರೆ ಇಸಾನ್ ಒಕುಮೊಯೆಡೆ ಅರಮನೆಗೆ ತಂದಿದ್ದರು. ಆಮೆಯ ಪಾಲನೆಗಾಗಿಯೇ ಒಗ್‌ಬೊಮೊಶೋ ದೊರೆಯು ಅರಮನೆಯ ಲ್ಲಿ ಇಬ್ಬರು ಉದ್ಯೋಗಿಗಳನ್ನು ನೇಮಿಸಿದ್ದರು. ಮೃತ ಆಮೆಯ ಕಳೇಬರವನ್ನು ಮುಂದಿನ ಪೀಳಿಗೆಗಾಗಿ ಸಂರಕ್ಷಿಸಿಡಲಾಗುವುದು ಎಂದು ಅಜಾಮು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News