ಖಂದೀಲ್ ಬಲೂಚ್ ಕೊಲೆ ಪ್ರಕರಣ: ಇನ್ನೋರ್ವ ಸಹೋದರನ ಬಂಧನ

Update: 2019-10-06 17:41 GMT

ಮುಲ್ತಾನ್, ಅ.6: ಪಾಕ್ ರೂಪದರ್ಶಿ ಖಂದೀಲ್ ಬಲೂಚ್ ಹತ್ಯೆ ಆರೋಪದಲ್ಲಿ ತಲೆಮರೆಸಿಕೊಂಡಿದ್ದ ಆಕೆಯ ಸಹೋದರ ಮುಹಮ್ಮದ್ ಆರಿಫ್‌ ನನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಆರೋಪಿ ಆರಿಫ್ ನನ್ನು ಮುಲ್ತಾನ್‌ನ ಮುಝಫರಬಾದ್ ನಗರದ ಪೊಲೀಸರಿಗೆ ಹಸ್ತಾಂತರಿಸಲಾಗಿದೆಯೆಂದು ಹಿರಿಯ ಠಾಣಾಧಿಕಾರಿ ಮಹಾರ್ ಹಿರಾಜ್ ತಿಳಿಸಿದ್ದಾರೆ. ಖಂದೀಲ್ ಬಲೂಚ್ ಅವರ ಕೊಲೆ ಪ್ರಕರಣದಲ್ಲಿ ಆಕೆಯ ಇನ್ನೋರ್ವ ಸಹೋದರ ಖಾಂದೀಲ್ ವಾಸೀಂ ಖಾನ್ ದೋಷಿಯೆಂದು ಪಾಕಿಸ್ತಾನ ನ್ಯಾಯಾಲಯ ತೀರ್ಪು ನೀಡಿದ ವಾರದ ಬಳಿಕ ಮುಹಮ್ಮದ್ ಆರಿಫ್ ‌ನ ಬಂಧನವಾಗಿದೆ.

ಮಾಡೆಲ್ ಖಂದೀಲ್ ಬಲೂಚ್‌ರನ್ನು 2016ರಲ್ಲಿ ಪಂಜಾಬ್ ಪ್ರಾಂತದಲ್ಲಿರುವ ಆಕೆಯ ನಿವಾಸದಲ್ಲಿ, ಸಹೋದರ ವಾಸೀಂ ಕತ್ತುಹಿಸುಕಿ ಕೊಲೆ ಮಾಡಿದ್ದಾನೆಂದು ಆರೋಪಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಖಂದೀಲ್ ಬಲೂಚ್ ಅವರ ತಂದೆ ಮುಹಮ್ಮದ್ ಅಝೀಂ ಬಲೂಚ್ ಅವರು ವಾಸಿಂ ಹಾಗೂ ಇತರರ ವಿರುದ್ಧ ಕೊಲೆ ಮೊಕದ್ದಮೆ ದಾಖಲಿಸಿದ್ದಾರೆ.

 2016ರಲ್ಲಿ ಸಲ್ಲಿಸಿದ ಅಫಿದಾವಿತ್‌ನಲ್ಲಿ ಖಂದೀಲ್ ಅವರ ಹೆತ್ತವರು, ತಮ್ಮ ಇತರ ಇಬ್ಬರು ಪುತ್ರರಾದ ಅಸ್ಲಾಂ ಶಾಹೀನ್‌ ಹಾಗೂ ಆರಿಫ್ ಅವರನ್ನು ಆರೋಪಿಗಳೆಂದು ಹೆಸರಿಸಿದ್ದರು. ವಿಶೇಷ ಮ್ಯಾಜಿಸ್ಟ್ರೇಟರ ಮುಂದೆ ಹಾಜರುಪಡಿಸಿದ ಸಂದರ್ಭದಲ್ಲಿ ಆರೋಪಿ ವಾಸಿಂ ತಾನು ಖಾಂದೀಲ್‌ಳನ್ನು ಅಮಲುಪದಾರ್ಥ ನೀಡಿದ ಬಳಿಕ ಕತ್ತುಹಿಸುಕಿ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದ.

ತನ್ನ ‘ಉದ್ದಟತನ’ದ ಜೀವನಶೈಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿನ ಅಶ್ಲೀಲ ಪೋಸ್ಟ್‌ಗಳ ಮೂಲಕ ಖಂದೀಲ್ ಬಲೂಚ್, ಬಲೂಚ್ ಪರಂಪರೆಗೆ ಕೆಟ್ಟ ಹೆಸರು ತರುತ್ತಿದ್ದಾಳೆಂದು ಆತ ಮ್ಯಾಜಿಸ್ಟ್ರೇಟರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News