ಕಚ್ಚಾ ತೈಲ ರಫ್ತು ಮಾಡಲು ಸಾಧ್ಯವಾದ ಎಲ್ಲ ದಾರಿಯನ್ನೂ ಇರಾನ್ ಬಳಸಲಿದೆ: ಸಚಿವ

Update: 2019-10-06 17:45 GMT

ಟೆಹರಾನ್,ಅ.6: ಕಚ್ಚಾ ತೈಲ ರಫ್ತು ಮಾಡುವುದು ಇರಾನ್‌ನ ಕಾನೂನಾತ್ಮಕ ಹಕ್ಕು ಮತ್ತು ಅದನ್ನು ರಫ್ತು ಮಾಡಲು ಸಾಧ್ಯವಿರುವ ಎಲ್ಲ ದಾರಿಯನ್ನೂ ಇರಾನ್ ಬಳಸಲಿದೆ ಎಂದು ತೈಲ ಸಚಿವ ಬಿಜಾನ್ ಝಂಗೆನಿ ರವಿವಾರ ತಿಳಿಸಿದ್ದಾರೆ.

 ನಾವು ಅಮೆರಿಕದ ಒತ್ತಡಕ್ಕೆ ಮಣಿಯುವುದಿಲ್ಲ. ಯಾಕೆಂದರೆ ಕಚ್ಚಾ ತೈಲ ರಫ್ತು ಮಾಡುವುದು ಇರಾನ್‌ನ ಕಾನೂನಾತ್ಮಕ ಹಕ್ಕು ಎಂದು ಝಂಗೆನಿ ತಿಳಿಸಿದ್ದಾರೆ. ಇರಾನ್ ಕಳೆದ ವರ್ಷ 2015ರ ಪರಮಾಣು ಒಪ್ಪಂದದಿಂದ ಹಿಂದೆ ಸರಿಯುವ ನಿರ್ಧಾರ ತೆಗೆದುಕೊಂಡ ನಂತರ ಅದರ ಮೇಲೆ ಅಮೆರಿಕ ಹೇರಿದ್ದ ನಿರ್ಬಂಧದ ಮೊದಲು ಗುರಿ ಇರಾನ್‌ನ ಇಂಧನ ಉದ್ಯಮವಾಗಿತ್ತು. ಈ ನಿರ್ಬಂಧದಿಂದ ಇರಾನ್‌ನ ತೈಲದ ಎರಡನೇ ದೊಡ್ಡ ಆಮದುದಾರನಾಗಿರುವ ಭಾರತದ ಮೇಲೆ ಪರಿಣಾಮ ಬೀರಿತ್ತು.

ನಿರ್ಬಂಧ ಜಾರಿಗೆ ಬರುವ ಮೊದಲೇ ಭಾರತ ತನ್ನ ತೈಲ ಅಗತ್ಯ ಪೂರೈಸಲು ಸೌದಿ ಅರೇಬಿಯ ಹಾಗೂ ಇತರ ಪರ್ಯಾಯ ಮೂಲಗಳತ್ತ ಮುಖ ಮಾಡಿತ್ತು. ನಿರ್ಬಂಧ ಮರುಹೇರಲ್ಪಟ್ಟ ನಂತರ ಇರಾನ್‌ನ ಕಚ್ಚಾತೈಲ ರಫ್ತಿನಲ್ಲಿ ಶೇ.80ರಷ್ಟು ಇಳಿಕೆಯಾಗಿದೆ ಎಂದು ಅಂದಾಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News