ಇನ್ನಿಬ್ಬರು ಮಕ್ಕಳನ್ನು ಹತ್ಯೆಗೈಯಲು ಮುಂದಾಗಿದ್ದ ಕೇರಳದ ಸರಣಿ ಹಂತಕಿ: ಆರೋಪ

Update: 2019-10-09 17:19 GMT

ಕೋಝಿಕೋಡ್, ಅ. 9: ಕೇರಳದ ಸರಣಿ ಹತ್ಯೆಗೆ ಇನ್ನೊಂದು ಕುತೂಹಲಕಾರಿ ತಿರುವು ದೊರಕಿದೆ. ಈ ಸರಣಿ ಹತ್ಯೆಯ ಪ್ರಧಾನ ಆರೋಪಿ ಜೋಲಿ ಶಾಜು ಇನ್ನಷ್ಟು ಹತ್ಯೆ ನಡೆಸಲು ಯೋಜಿಸಿದ್ದಳು ಎಂಬುದು ಬಹಿರಂಗವಾಗಿದೆ.

ತನ್ನ ಕುಟುಂಬದ ಆರು ಮಂದಿಯನ್ನು ಹತ್ಯೆಗೈದ ಪ್ರಕರಣದಲ್ಲಿ ಆರೋಪಿಯಾಗಿರುವ ಜೋಲಿ ಶಾಜು, ಇನ್ನಿಬ್ಬರು ಮಕ್ಕಳನ್ನು ಹತ್ಯೆಗೈಯುವ ಸಂಚು ರೂಪಿಸಿದ್ದಳು ಎಂದು ತಿಳಿದು ಬಂದಿದೆ. ಈ ಹಿಂದೆ 6 ಮಂದಿಯನ್ನು ಹತ್ಯೆಗೈದ ರೀತಿಯಲ್ಲಿ ಸಯನೈಡ್ ನೀಡಿ ಇನ್ನಿಬ್ಬರು ಮಕ್ಕಳನ್ನು ಹತ್ಯೆಗೈಯಲು ಜೋಲಿ ಶಾಜು ಯೋಜಿಸಿದ್ದಳು ಎಂದು ಕೋಯಿಕ್ಕೋಡ್‌ನ ಗ್ರಾಮೀಣ ಪೊಲೀಸ್ ಅಧೀಕ್ಷಕ ಕೆ.ಜಿ. ಸಿಮನ್ ತಿಳಿಸಿದ್ದಾರೆ.

ಕುಟುಂಬದಲ್ಲಿ ನಡೆದ ಕೆಲವು ಘಟನೆಗಳ ಬಗ್ಗೆ ನಮಗೆ ಮಾಹಿತಿ ದೊರಕಿದೆ. ಆದರೆ, ಯಾವುದೇ ಸಾವು ಸಂಭವಿಸಿಲ್ಲ ಎಂದು ಅವರು ಹೇಳಿದ್ದಾರೆ. ವಿಷಪ್ರಾಸನದ ಲಕ್ಷಣವಾದ ಉಸಿರಾಟದ ತೊಂದರೆ ಮಕ್ಕಳಲ್ಲಿ ಕಾಣಿಸಿಕೊಂಡಿತ್ತು. ಆದರೆ, ಅವರು ಸಾವಿನಿಂದ ಪಾರಾಗಿದ್ದರು ಎಂದು ಅವರು ತಿಳಿಸಿದ್ದಾರೆ. ಸಂಭವನೀಯ ಸಂತ್ರಸ್ತರ ಗುರುತನ್ನು ಪೊಲೀಸರು ಬಹಿರಂಗಪಡಿಸಿಲ್ಲ. ಆದರೆ, ಅವರು ಥಾಮಸ್ ಕುಟುಂಬಕ್ಕೆ ಹತ್ತಿರದ ಸಂಬಂಧ ಹೊಂದಿದ್ದರು ಎಂದು ಸಿಮನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News