ಕೋಲಾರ: ಟೊಮೋಟೋ ಬೆಳೆಗೆ ಗುಣಮಟ್ಟದ ಔಷಧಿ ನೀಡಲು ಆಗ್ರಹ

Update: 2019-10-09 18:37 GMT

ಕೋಲಾರ,ಅ.09: ಊಜಿ ನೊಣದಿಂದ ನಾಶವಾಗಿರುವ  ರೈತರ ಟೊಮೋಟೋ ಬೆಳೆಗೆ ಪ್ರತಿ ಎಕರೆ 2 ಲಕ್ಷ ಪರಿಹಾರ ಜೊತೆಗೆ ಗುಣಮಟ್ಟದ ಔಷಧಿಯನ್ನು ನೀಡಬೇಕೆಂದು ಒತ್ತಾಯಿಸಿ ರೈತ ಸಂಘದಿಂದ ಟೋಮೋಟೋವನ್ನು ರಸ್ತೆಗೆ ಸುರಿದು ಹೋರಾಟದ ಮುಖಾಂತರ ಜಂಟಿ ಕೃಷಿ ನಿರ್ದೇಶಕರಿಗೆ ಮನವಿ ನೀಡಿ ಅಗ್ರಹಿಸಲಾಯಿತು

ಹೋರಾಟದ ನೇತೃತ್ವ ವಹಿಸಿ ಮಾತನಾಡಿದ ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ,ನಾರಾಯಣಗೌಡ, ಸರ್ಕಾರಿ ಬ್ಯಾಂಕ್‍ಗಳಲ್ಲಿ ಸಾಲ ಸಿಗದೆ ಖಾಸಗಿ  ಸಾಲ ಮಾಡಿ ಅಲ್ಪ ಸ್ವಲ್ಪವಿರುವ ನೀರಿನಲ್ಲಿ ಬೆಳೆದ ಟೊಮೊಟೋ, ಕ್ಯಾಪ್ಸಿಕಾಂ, ಮತ್ತಿತರ ವಾಣಿಜ್ಯ ಬೆಳೆಗಳು ಕೈಗೆ ಬರುವ ಸಮಯದಲ್ಲಿ ನಕಲಿ ಬಿತ್ತನೆ ಬೀಜ ಕಳಪೆ ಕೀಟ ನಾಶಕ ಹಾಗೂ ರೋಗ ಭಾಧೆ ಮತ್ತು ಮಾರುಕಟ್ಟೆ ಅವ್ಯವಸ್ಥೆಯಿಂದ ಬೆಳೆ ಕೈಗೆ ಸಿಗದೆ ಸಂಪೂರ್ಣವಾಗಿ ನಾಶ ಹೊಂದುತ್ತಿದ್ದರೂ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು  ಕಾರ್ಪೋರೇಟ್ ಕಂಪನಿಗಳ ಗುಲಾಮರಾಗಿ ಕೆಲಸ ನಿರ್ವಹಿಸಿ ಇಡೀ ರೈತರ ಬದುಕನ್ನು ಬೀದಿಗೆ ತಳ್ಳಲು ಮುಂದಾಗಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಸಂಚಾಲಕ ಕೆ,ಶ್ರೀನಿವಾಸಗೌಡ ಮಾತನಾಡಿ, ಬೆಳೆದಿರುವ ಟೊಮೋಟೋ ಬೆಳೆಗೆ ಬಂದಿರುವ ಊಜಿಯಿಂದ ಶೇ.80ರಷ್ಟು ಬೆಳೇ  ಇಡೀ ರೈತ ಕುಟುಂಬಗಳು ಬೀದಿಗೆ ಬೀಳುತ್ತಿವೆ. ಸಮೃದ್ದಿಯಾಗಿ ಬಂದಿರುವ ಬೆಳೆಯ ಪಸಲು ಇಂದು ಊಜಿ ಹೊಡೆತಕ್ಕೆ ಸಿಲುಕಿ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯಿದ್ದರೂ ಗುಣಮಟ್ಟವಿಲ್ಲದ ಪಸಲಿಲ್ಲದೆ ಮಾರುಕಟ್ಟೆಯಲ್ಲಿ ನಷ್ಟದ ಬೆಲೆಗೆ ಮಾರಾಟ ಮಾಡಬೇಕಾದ ಪರಿಸ್ಥಿತಿ ಇದೆ. 100 ಬಾಕ್ಸ್ ಟೋಮೋಟೋ ಬಂದರೆ ಅದರಲ್ಲಿ 90 ಬಾಕ್ಸ್ ಊಜಿ ಕ್ರೀಮಿ ಕೀಟಗಳ ಪಾಲಾಗುತ್ತಿದ್ದು, ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯಿದ್ದರೂ ರೈತರ ಕೈಗೆ ಬೆಲೆಸಿಗದೆ ಖಾಸಗಿ ಸಾಲಕ್ಕೆ ಸಿಲುಕುತ್ತಿದ್ದರೂ ಟೋಮೊಟೋ ಬೆಳೆಗೆ ಕಾಡುತ್ತಿರುವ ಊಜಿ ನೊಣಕ್ಕೆ ಗುಣಮಟ್ಟದ ಔಷದಿ ಕೊಡುವಲ್ಲಿ ವಿಪಲವಾಗಿವೆ.  ಇಲಾಖೆ ಅಧಿಕಾರಿಗಳು ಇದುವರೆಗೂ ಊಜಿ ನೊಣದ ಬಗ್ಗೆ ರೈತರ ತೋಟಕ್ಕೆ ಬೇಟಿ ನೀಡಿ ಪರೀಶೀಲನೆ ಮಾಡದ ಜೊತೆಗೆ ಅಂಗಡಿ ಮಾಲೀಕರು ಹಾಗೂ ಬೀಜ ಕಂಪನಿಗಳ ಜೊತೆ ಒಳ ಒಪ್ಪಂದ ಮಾಡಿಕೊಂಡು ಟೊಮೋಟೋ ಬೆಳೆಗಾರರನ್ನು ಬೀದಿಗೆ ತಳ್ಳುತ್ತಿದ್ದಾರೆಂದು ರೈತರು ಸಂಬಂಧಪಟ್ಟ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಸಂಬಂದಪಟ್ಟ ಇಲಾಖೆಯ ಅಧಿಕಾರಿಗಳಿಗೆ ಮಾನವೀಯತೆ ಇದ್ದರೆ ಕೂಡಲೇ ನಾಯಿಕೊಡಗಳಂತೆ ತಲೆಯೆತ್ತಿರುವ ಕಳಪೆ ಔಷದಿ ಮಾರಾಟಕ್ಕೆ  ಕಡಿವಾಣ ಹಾಕಿ ಗುಣಮಟ್ಟದ ಔಷದಿಯನ್ನು ಊಜಿ ನಿಯಂತ್ರಣಕ್ಕೆ ನೀಡಿ ನಷ್ಟವಾಗಿರುವ ರೈತರ ಪ್ರತಿ ಒಂದು ಎಕರೆ ಟೊಮೋಟೋ ಬೆಳೆಗೆ 2 ಲಕ್ಷ ಪರಿಹಾರ ನೀಡಬೇಕೆಂದು ಅಗ್ರಹಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಜಂಟಿ ಕೃಷಿ ನಿರ್ದೇಶಕರು ಮತ್ತು ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರು ಟೊಮೋಟೋ ಬೆಳೆಗೆ ಬಂದಿರುವ ಊಜಿ ನೊಣದ ಬಗ್ಗೆ ನಮಗೆ ಸಂಪೂರ್ಣ ಮಾಹಿತಿ ಇಲ್ಲ, ಇದರ ಬಗ್ಗೆ ಮಾಹಿತಿ ತರಿಸಿಕೊಂಡು ಕರಪತ್ರದ ಮೂಲಕ ಜಾಗೃತಿ ಮೂಡಿಸುವ ಜೊತೆಗೆ ಕೂಡಲೇ ಪ್ರತಿ ತಾಲ್ಲೂಕಿನಲ್ಲೂ ರೈತರ ಟೊಮೊಟೋ ಬೆಳೆಯ ಜಮೀನಿಗೆ ಬೇಟಿ ನೀಡಿ ವರದಿ ತರಿಸಿಕೊಂಡು ಗುಣಮಟ್ಟವಿಲ್ಲದ ಔಷಧಿ ನೀಡಿರುವ ಅಂಗಡಿಗಳ ವಿರುದ್ದ ಕ್ರಮ ಕೈಗೊಂಡು ಕೂಡಲೇ ರೈತರ ಮತ್ತು ಅಧಿಕಾರಿಗಳ ಸಭೆ ಕರೆಯುವ ಭರವಸೆಯನ್ನು ನೀಡಿದರು.

ಈ ಹೋರಾಟದಲ್ಲಿ ಜಿಲ್ಲಾದ್ಯಕ್ಷೆ ಎ.ನಳಿನಿ, ಜಿಲ್ಲಾದ್ಯಕ್ಷ ಮರಗಲ್ ಶ್ರೀನಿವಾಸ್, ಹುಲ್ಕೂರ್ ಹರಿಕುಮಾರ್, ತೆರ್ನಹಳ್ಳಿ ಆಂಜಿನಪ್ಪ, ಸಹದೇವಪ್ಪ, ಕ್ಯಾಸಂಬಳ್ಳಿ ಪ್ರತಾಪ್, ವಡ್ಡಹಳ್ಳಿ ಮಂಜುನಾಥ್, ಪುರುಷೋತ್ತಮ್, ಮಂಗಸಂದ್ರ ನಾಗೇಶ್, ತಿಮ್ಮಣ್ಣ, ವೆಂಕಟೇಶಪ್ಪ,   ಸುಪ್ರೀಂಚಲ, ಶಿವು, ಮೂರ್ತಿ, ವೇಣು, ನವೀನ್, ಪ್ರಭಾಕರ್, ವೇಣು, ರಂಜಿತ್, ಸಾಗರ್, ಕೃಷ್ಣ, ಮುಂತಾದವರಿದ್ದರು