ಆತುರದ ನಿರ್ಧಾರ

Update: 2019-10-10 05:33 GMT

ಮಾನ್ಯರೇ,

7ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ನಡೆಸಲು ಹೊರಟಿರು ವುದು ಆತುರದ ನಿರ್ಧಾರ. ಸ್ಪರ್ಧಾತ್ಮಕ ಶಿಕ್ಷಣದ ಹೆಸರಿನಲ್ಲಿ ಮಕ್ಕಳ ಬಾಲ್ಯವನ್ನು ಈಗಾಗಲೇ ಕಸಿದುಕೊಂಡಾಗಿದೆ. ಈಗ ಏಳನೇ ತರಗತಿಗೆ ಪಬ್ಲಿಕ್ ಪರೀಕ್ಷೆಯನ್ನು ಪರಿಚಯಿಸುವ ಮೂಲಕ ಎಳೆಯರ ಮೇಲೆ ಮತ್ತಷ್ಟು ಒತ್ತಡ ಹೇರಿದಂತಾಗುತ್ತದೆ. ಅದರಲ್ಲೂ ಶೈಕ್ಷಣಿಕ ವರ್ಷದಲ್ಲಿ ಅರ್ಧಭಾಗ ಮುಗಿದಿರುವಾಗ ಇಂಥ ಪ್ರಯೋಗಗಳ ಚಿಂತನೆಯನ್ನು ಹರಿಯಬಿಡುವುದೇ ಸರಿಯಲ್ಲ. ಪ್ರಾಥಮಿಕ ಶಿಕ್ಷಣ ಕ್ಷೇತ್ರಕ್ಕೆ ಸದ್ಯಕ್ಕೆ ಅಗತ್ಯವಿರುವುದು ಪ್ರಯೋಗಗಳಲ್ಲ; ಬದಲು ಇರುವ ಅಸಂಬದ್ಧತೆಗಳನ್ನು ಸರಿಪಡಿಸುವುದಾಗಿದೆ. ಅದರಲ್ಲೂ ಮೊದಲು ಪ್ರಾಥಮಿಕ ಶಾಲಾ ಶಿಕ್ಷಕರ ಮೇಲಿನ ಶಿಕ್ಷಣೇತರ ಹೊರೆಗಳನ್ನು ಇಳಿಸಿ, ಅವರ ಎಲ್ಲ ಸಮಯವನ್ನು ಬೋಧನೆಗೆ ದೊರೆಯುವಂತೆ ಮಾಡಬೇಕಿದೆ.

-ಸಂತೋಷ ಜಾಬೀನ್, ಸುಲೇಪೇಟೆ

Writer - -ಸಂತೋಷ ಜಾಬೀನ್, ಸುಲೇಪೇಟೆ

contributor

Editor - -ಸಂತೋಷ ಜಾಬೀನ್, ಸುಲೇಪೇಟೆ

contributor

Similar News