ಒಂದು ದಿನದ ಮಟ್ಟಿಗೆ ಬ್ರಿಟಿಷ್ ಹೈಕಮಿಷನರ್ ಆದ ಆಯಿಷಾ ಖಾನ್
ಹೊಸದಿಲ್ಲಿ, ಅ.11: ಗೋರಖ್ ಪುರದ 22 ವರ್ಷದ ಯುವತಿಯೊಬ್ಬರು ಒಂದು ದಿನದ ಮಟ್ಟಿಗೆ ಬ್ರಿಟಿಷ್ ಹೈಕಮಿಷನರ್ ಆಗುವ ಮೂಲಕ ಸಾಧನೆ ಮಾಡಿದ್ದಾರೆ.
'ಹೆಣ್ಣು ಮಗುವಿನ ಅಂತಾರಾಷ್ಟ್ರೀಯ ದಿನ'ವಾದ ಅಕ್ಟೋಬರ್ 11ರಂದು ನಡೆದ 'ಹೈ ಕಮಿಷನರ್ ಫಾರ್ ಎ ಡೇ' ಸ್ಪರ್ಧೆಯಲ್ಲಿ ಅಗ್ರಸ್ಥಾನ ಗಳಿಸುವ ಮೂಲಕ ಆಯಿಷಾ ಖಾನ್ ಒಂದು ದಿನದ ಮಟ್ಟಿಗೆ ಈ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ಮೂರನೆ ವರ್ಷ ನಡೆಯುತ್ತಿರುವ ಈ ಸ್ಪರ್ಧೆಯಲ್ಲಿ ಭಾಗವಹಿಸುವವರು 'ಲಿಂಗ ಸಮಾನತೆ ಯಾಕೆ ಮುಖ್ಯ ಮತ್ತು ಲಿಂಗ ಸಮಾನತೆ ವಿಚಾರದಲ್ಲಿ ಯಾರು ನಮಗೆ ಪ್ರೇರಣೆ' ಎನ್ನುವ ಬಗ್ಗೆ 1 ನಿಮಿಷ ಮಾತನಾಡಬೇಕು. ಈ ಸ್ಪರ್ಧೆಗೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದ್ದು, 14 ರಾಜ್ಯಗಳಿಂದ ಸ್ಪರ್ಧಾರ್ಥಿಗಳು ಭಾಗವಹಿಸಿದ್ದಾರೆ ಎಂದು ಸಂಘಟಕರು ಮಾಹಿತಿ ನೀಡಿದ್ದಾರೆ.
"ಲಿಂಗ ಸಮಾನತೆಯನ್ನು ಸಾಧಿಸಲು ಶಿಕ್ಷಣವು ಪ್ರಬಲ ಅಸ್ತ್ರ ಎಂದು ನಾನು ನಂಬುತ್ತೇನೆ. ನಾನು ಈ ಹಿಂದೆ ಜಯಿಸಿದವರನ್ನು ಗಮನಿಸಿದ್ದೆ. ನನಗೆ ಈ ಅವಕಾಶ ನೀಡಿದ್ದಕ್ಕಾಗಿ ಬ್ರಿಟಿಷ್ ಹೈಕಮಿಷನ್ ಗೆ ಧನ್ಯವಾದಗಳು" ಎಂದು ಆಯಿಷಾ ಹೇಳಿದ್ದಾರೆ.