ಕಾಶ್ಮೀರ ನಿರ್ಣಯದಲ್ಲಿ ತಪ್ಪು ವಿವರಣೆಗೆ ಅವಕಾಶ

Update: 2019-10-11 18:34 GMT

ಲಂಡನ್, ಅ. 11: ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿಯ ಬಗ್ಗೆ ತನ್ನ ಪಕ್ಷ ಅಂಗೀಕರಿಸಿದ ತುರ್ತು ನಿರ್ಣಯದ ಕೆಲವು ಭಾಗಗಳಿಗೆ ‘ತಪ್ಪು ವಿವರಣೆ’ ನೀಡಲು ಸಾಧ್ಯವಿದೆ ಎಂದು ಬ್ರಿಟನ್‌ನ ಲೇಬರ್ ಪಕ್ಷದ ನಾಯಕ ಜೆರೆಮಿ ಕಾರ್ಬಿನ್ ಗುರುವಾರ ಹೇಳಿದ್ದಾರೆ.

ಕಾಶ್ಮೀರ ವಿಷಯದಲ್ಲಿ ಅಂತರ್‌ರಾಷ್ಟ್ರೀಯ ಮಧ್ಯಸ್ಥಿಕೆಯ ಅಗತ್ಯವಿದೆ ಎಂಬುದಾಗಿ ಲೇಬರ್ ಪಕ್ಷದ ನಿರ್ಣಯ ಹೇಳುತ್ತದೆ.

ಪಕ್ಷದ ಈ ನಿರ್ಣಯಕ್ಕೆ ಬ್ರಿಟನ್‌ನಲ್ಲಿ ನೆಲೆಸಿರುವ ಭಾರತೀಯ ಸಮುದಾಯದಿಂದ ವ್ಯಾಪಕ ಟೀಕೆಗಳು ವ್ಯಕ್ತವಾದ ಬಳಿಕ ಕಾರ್ಬಿನ್ ಈ ಹೇಳಿಕೆ ನೀಡಿದ್ದಾರೆ.

ಭಾರತೀಯ ಸಮುದಾಯದ ಸಮಸ್ಯೆಗಳನ್ನು ನಾನು ಅರ್ಥಮಾಡಿಕೊಂಡಿದ್ದೇನೆ ಹಾಗೂ ಅವರ ಕಳವಳಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದೇನೆ ಎಂದು ಕಾರ್ಬಿನ್ ಹೇಳಿದರು.

ಕಾಶ್ಮೀರ ಕುರಿತ ನಿರ್ಣಯವು ಪಕ್ಷದ ಸಮ್ಮೇಳನದ ಪ್ರಜಾಸತ್ತಾತ್ಮಕ ಪ್ರಕ್ರಿಯೆಯ ಭಾಗವಾಗಿತ್ತು ಎಂದು ಪಕ್ಷದ ಲಾಬಿ ಗುಂಪು ‘ಲೇಬರ್ ಫ್ರೆಂಡ್ಸ್ ಆಫ್ ಇಂಡಿಯ’ಕ್ಕೆ ಬರೆದ ಪತ್ರವೊಂದರಲ್ಲಿ ಅವರು ಹೇಳಿದ್ದಾರೆ.

‘‘ಆದರೂ ನಿರ್ಣಯದಲ್ಲಿ ಬಳಸಿದ ಭಾಷೆಯನ್ನು ಭಾರತ ಮತ್ತು ಭಾರತೀಯ ಸಮುದಾಯದ ವಿರೋಧಿ ಎಂಬುದಾಗಿ ಬಿಂಬಿಸಲು ಅವಕಾಶವಿದೆ ಎಂಬುದನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ’’ ಎಂದು ಪತ್ರ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News