ಚೀನಾದಲ್ಲಿ ಮೂರನೇ ಅನೌಪಚಾರಿಕ ಶೃಂಗಸಭೆಗೆ ಜಿನ್‌ಪಿಂಗ್ ಆಹ್ವಾನ ಸ್ವೀಕರಿಸಿದ ಪ್ರಧಾನಿ ಮೋದಿ

Update: 2019-10-12 17:12 GMT

ಚೆನ್ನೈ, ಅ.12: ಮುಂದಿನ ವರ್ಷ ಮೂರನೇ ಅನೌಪಚಾರಿಕ ಶೃಂಗಸಭೆಗಾಗಿ ಚೀನಾಕ್ಕೆ ಭೇಟಿ ನೀಡುವಂತೆ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಆಹ್ವಾನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸ್ವೀಕರಿಸಿದ್ದಾರೆ.

ತಮಿಳುನಾಡಿನ ಮಹಾಬಲಿಪುರಂನಲ್ಲಿ ನಡೆದ ಎರಡನೇ ಅನೌಪಚಾರಿಕ ಶೃಂಗಸಭೆಯ ಸಂದರ್ಭದಲ್ಲಿ ಜಿನ್‌ಪಿಂಗ್ ಅವರು ಈ ಆಹ್ವಾನವನ್ನು ನೀಡಿದ್ದರು.

ಶನಿವಾರ ಶೃಂಗಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿದ ವಿದೇಶಾಂಗ ಕಾರ್ಯದರ್ಶಿ ವಿಜಯ ಗೋಖಲೆ ಅವರು,ಧನಾತ್ಮಕ ಹಿನ್ನೆಲೆಯಲ್ಲಿ ಅನೌಪಚಾರಿಕ ಶೃಂಗಸಭೆಗಳನ್ನು ನಡೆಸುವ ಪರಿಪಾಠವು ‘ವೂಹಾನ್ ಸ್ಪಿರಿಟ್ ’ ಮತ್ತು ‘ಚೆನ್ನೈ ಕನೆಕ್ಟ್ ’ಗೆ ಅನುಗುಣವಾಗಿ ನಾಯಕರ ಮಟ್ಟದಲ್ಲಿ ಮಾತುಕತೆಗಳನ್ನು ಗಾಢಗೊಳಿಸಲು ಮತ್ತು ಪರಸ್ಪರ ತಿಳುವಳಿಕೆಯನ್ನು ಉತ್ತೇಜಿಸಲು ಮಹತ್ವದ ಅವಕಾಶವನ್ನೊದಗಿಸುತ್ತದೆ ಎಂದು ಮೋದಿ ಮತ್ತು ಜಿನ್‌ಪಿಂಗ್ ಅವರು ಪ್ರಶಂಸಿಸಿದರು ಎಂದು ತಿಳಿಸಿದರು.

ಭವಿಷ್ಯದಲ್ಲಿಯೂ ಈ ಪರಿಪಾಠವನ್ನು ಮುಂದುವರಿಸಲು ಉಭಯ ನಾಯಕರು ಒಪ್ಪಿಕೊಂಡಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News