ರಾಜಕೀಯ ಬಂಧನ ಪ್ರಕರಣಗಳ ನಿರಂತರ ಅವಲೋಕನ: ಜಮ್ಮು ಮತ್ತು ಕಾಶ್ಮೀರ ಆಡಳಿತದ ಹೇಳಿಕೆ

Update: 2019-10-12 17:31 GMT

ಶ್ರೀನಗರ, ಅ.12: ಜಮ್ಮು ಮತ್ತು ಕಾಶ್ಮೀರದಲ್ಲಿ ಹಿರಿಯ ರಾಜಕೀಯ ಮುಖಂಡರ ಬಂಧನ ಪ್ರಕರಣಗಳನ್ನು ನಿರಂತರವಾಗಿ ಪರಿಶೀಲಿಸಲಾಗುತ್ತಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಆಡಳಿತ ಹೇಳಿದೆ.

ಮಾಜಿ ಮುಖ್ಯಮಂತ್ರಿಗಳಾದ ಫಾರೂಕ್ ಅಬ್ದುಲ್ಲಾ, ಉಮರ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಸಹಿತ ಪ್ರಮುಖ ಮುಖಂಡರ ಬಂಧನ ಪ್ರಕರಣಗಳನ್ನು ನಿರಂತರ ಅವಲೋಕಿಸಲಾಗುತ್ತಿದೆ. ಇದೊಂದು ಕ್ರಿಯಾತ್ಮಕ ಪ್ರಕ್ರಿಯೆಯಾಗಿದೆ. ಜನರ ಬಿಡುಗಡೆ ಮುಂದುವರಿಯಲಿದ್ದು ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಜಮ್ಮು ಮತ್ತು ಕಾಶ್ಮೀರದ ಪ್ರಧಾನ ಕಾರ್ಯದರ್ಶಿ ರೋಹಿತ್ ಕನ್ಸಾಲ್ ಹೇಳಿದ್ದಾರೆ.

ಕಾಶ್ಮೀರದಲ್ಲಿ ಬಂಧನದಲ್ಲಿರುವ ರಾಜಕೀಯ ಮುಖಂಡರನ್ನು ಹಂತ ಹಂತವಾಗಿ ಬಿಡುಗಡೆಗೊಳಿಸಲಾಗುತ್ತದೆ ಎಂದು ಕಳೆದ ವಾರ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲ ಸತ್ಯಪಾಲ ಮಲಿಕ್‌ರ ಸಲಹೆಗಾರ ಫಾರೂಕ್ ಖಾನ್ ಹೇಳಿಕೆ ನೀಡಿದ್ದರು. ಮುಖಂಡರ ಬಿಡುಗಡೆ ಕುರಿತು ಕುರಿತು ಕೇಂದ್ರ ಸರಕಾರ ಪೂರ್ವಭಾವಿ ಮಾತುಕತೆ ಆರಂಭಿಸಿದೆ ಎಂದು ಶುಕ್ರವಾರ ಸುದ್ದಿಸಂಸ್ಥೆ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News