ನಂ.1 ಸ್ಥಾನಕ್ಕಾಗಿ ಕೊಹ್ಲಿ-ಸ್ಮಿತ್ ಪೈಪೋಟಿ

Update: 2019-10-15 05:47 GMT

ದುಬೈ,ಅ.14: ದಕ್ಷಿಣ ಆಫ್ರಿಕಾ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಔಟಾಗದೆ 254 ರನ್ ಗಳಿಸಿದ್ದ ಭಾರತದ ನಾಯಕ ವಿರಾಟ್ ಕೊಹ್ಲಿ ಐಸಿಸಿ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ನಂ.1 ಬ್ಯಾಟ್ಸ್ ಮನ್ ಆಗುವತ್ತ ಹೆಜ್ಜೆ ಇಟ್ಟಿದ್ದಾರೆ. ಇದೀಗ ನಂ.1 ಸ್ಥಾನದಲ್ಲಿರುವ ಆಸ್ಟ್ರೇಲಿಯದ ಸ್ಟೀವ್ ಸ್ಮಿತ್‌ಗಿಂತ ಕೇವಲ ಒಂದು ಅಂಕ ಹಿಂದಿದ್ದಾರೆ.

ಆರಂಭಿಕ ಬ್ಯಾಟ್ಸ್ ಮನ್ ಮಾಯಾಂಕ್ ಅಗರ್ವಾಲ್ ರ್ಯಾಂಕಿಂಗ್‌ನಲ್ಲಿ ಪ್ರಗತಿ ಸಾಧಿಸಿ ಅಗ್ರ-20ರಲ್ಲಿ ಸ್ಥಾನ ಪಡೆದಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಟೆಸ್ಟ್‌ನಲ್ಲಿ 108 ರನ್ ಗಳಿಸಿದ್ದ ಮಾಯಾಂಕ್ 8 ಸ್ಥಾನ ಭಡ್ತಿ ಪಡೆದು 17ನೇ ಸ್ಥಾನಕ್ಕೇರಿದ್ದಾರೆ. ಚೇತೇಶ್ವರ ಪೂಜಾರ ಹಾಗೂ ಅಜಿಂಕ್ಯ ರಹಾನೆ ಕ್ರಮವಾಗಿ ನಾಲ್ಕನೇ ಹಾಗೂ 9ನೇ ಸ್ಥಾನದಲ್ಲಿದ್ದಾರೆ.

 ಬೌಲರ್‌ಗಳ ರ್ಯಾಂಕಿಂಗ್‌ನಲ್ಲಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 3 ಸ್ಥಾನ ಮೇಲಕ್ಕೇರಿ 7ನೇ ಸ್ಥಾನ ತಲುಪಿದ್ದು, ಬುಮ್ರಾ ಮೂರನೇ ಸ್ಥಾನ ಉಳಿಸಿಕೊಂಡಿದ್ದಾರೆ.

ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ರವೀಂದ್ರ ಜಡೇಜ ವೆಸ್ಟ್ ಇಂಡೀಸ್‌ನ ನಾಯಕ ಜೇಸನ್ ಹೋಲ್ಡರ್ ಬಳಿಕ ಎರಡನೇ ಸ್ಥಾನದಲ್ಲಿದ್ದಾರೆ. ಅಶ್ವಿನ್ ಐದನೇ ಸ್ಥಾನ ವಶಪಡಿಸಿ ಕೊಂಡಿದ್ದಾರೆ. ಮೊದಲ ಟೆಸ್ಟ್ ಪಂದ್ಯದ ಬಳಿಕ 2018ರ ಜನವರಿಯ ನಂತರ 900 ಅಂಕಗಿಂತ ಕೆಳಗೆ ಜಾರಿದ್ದ ಕೊಹ್ಲಿ ಇದೀಗ 936 ಅಂಕ ಗಳಿಸಿದ್ದು, ಕಳೆದ ವರ್ಷ ಆಗಸ್ಟ್‌ನಲ್ಲಿ ಸಾಧಿಸಿದ್ದ ಜೀವನಶ್ರೇಷ್ಠ ರೇಟಿಂಗ್ ಪಡೆಯಲು ಇನ್ನು ಒಂದು ಅಂಕ ಕೊರತೆ ಎದುರಿ ಸುತ್ತಿದ್ದಾರೆ. ರಾಂಚಿಯಲ್ಲಿ ನಡೆಯಲಿರುವ ಅಂತಿಮ ಟೆಸ್ ್ಟನ ಬಳಿಕ ಕೊಹ್ಲಿಗೆ ಆಸ್ಟ್ರೇಲಿಯದ ಸ್ಮಿತ್‌ರಿಂದ ಟೆಸ್ಟ್‌ನ ನಂ.1 ಬ್ಯಾಟ್ಸ್‌ಮನ್ ಸ್ಥಾನವನ್ನು ವಶಪಡಿಸಿ ಕೊಳ್ಳುವ ಉತ್ತಮ ಅವಕಾಶ ವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News