ವಿಂಡೀಸ್‌ನ ಏಕದಿನ, ಟಿ-20 ತಂಡ ಪ್ರಕಟ

Update: 2019-10-16 18:45 GMT

ಸೈಂಟ್‌ಜಾನ್ಸ್(ಆ್ಯಂಟಿಗುವಾ), ಅ.16: ವೆಸ್ಟ್ ಇಂಡೀಸ್ ತಂಡ ಮುಂಬರುವ ಅಫ್ಘಾನಿಸ್ತಾನ ವಿರುದ್ಧ ಸೀಮಿತ ಓವರ್‌ಗಳ ಕ್ರಿಕೆಟ್ ಸರಣಿಗೆ ತಂಡವನ್ನು ಪ್ರಕಟಿಸಿದೆ. ಇತ್ತೀಚೆಗೆ ಕೊನೆಗೊಂಡ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ(ಸಿಪಿಎಲ್)ಉತ್ತಮ ಪ್ರದರ್ಶನ ನೀಡಿರುವ ಹಲವು ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ವೆಸ್ಟ್‌ಇಂಡೀಸ್ ತಂಡ ಭಾರತದ ಡೆಹ್ರಾಡೂನ್‌ನಲ್ಲಿ ಅಫ್ಘಾನಿಸ್ತಾನದ ವಿರುದ್ಧ ನ.5 ರಿಂದ ಡಿ.1ರ ತನಕ ಮೂರು ಟ್ವೆಂಟಿ-20, ಮೂರು ಏಕದಿನ ಹಾಗೂ ಟೆಸ್ಟ್ ಪಂದ್ಯವನ್ನು ಆಡಲಿದೆ. ಕಿರೊನ್ ಪೊಲಾರ್ಡ್ ಸೀಮಿತ ಓವರ್ ಕ್ರಿಕೆಟ್‌ನಲ್ಲಿ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ. ಏಕೈಕ ಟೆಸ್ಟ್ ಪಂದ್ಯದಲ್ಲಿ ಜೇಸನ್ ಹೋಲ್ಡರ್ ತಂಡದ ನೇತೃತ್ವವಹಿಸಲಿದ್ದಾರೆ. ಅಚ್ಚರಿಯೆಂಬಂತೆ ಎಲ್ಲ 3 ತಂಡಗಳಲ್ಲೂ ಹೋಲ್ಡರ್ ಸ್ಥಾನ ಪಡೆದಿದ್ದಾರೆ.

►ಟ್ವೆಂಟಿ-20 ತಂಡ: ಕಿರೊನ್ ಪೊಲಾರ್ಡ್ (ನಾಯಕ),ನಿಕೊಲಸ್ ಪೂರನ್, ಎವಿನ್ ಲೂವಿಸ್, ಶಿಮ್ರೆನ್ ಹೆಟ್ಮೆಯರ್,ಶೆರ್ಫೊನ್ ರುಥರ್‌ಫೋರ್ಡ್, ಬ್ರೆಂಡನ್ ಕಿಂಗ್, ಫ್ಯಾಬಿಯನ್ ಅಲ್ಲೆನ್, ಜೇಸನ್ ಹೋಲ್ಡರ್, ಹೇಡನ್ ವಾಲ್ಶ್, ಲೆಂಡ್ಲ್ ಸಿಮೊನ್ಸ್, ಖಾರಿ ಪೀರ್, ಶೆಲ್ಡನ್ ಕಾಟ್ರೆಲ್, ದಿನೇಶ್ ರಾಮ್‌ದಿನ್, ಕೆಸ್ರಿಕ್ ವಿಲಿಯಮ್ಸ್, ಅಲ್ಝಾರಿ ಜೋಸೆಫ್.

►ಏಕದಿನ ತಂಡ: ಕಿರೊನ್ ಪೊಲಾರ್ಡ್(ನಾಯಕ), ಶೈ ಹೋಪ್, ಎವಿನ್ ಲೂಯಿಸ್, ಶಿಮ್ರನ್ ಹೆಟ್ಮೆಯರ್, ಸುನೀಲ್ ಅಂಬ್ರಿಸ್, ನಿಕೊಲಸ್ ಪೂರನ್, ಬ್ರೆಂಡನ್ ಕಿಂಗ್, ರೋಸ್ಟನ್ ಚೇಸ್, ಜೇಸನ್ ಹೋಲ್ಡರ್, ಹೇಡನ್ ವಾಲ್ಶ್, ಖಾರಿ ಪೀರ್, ಶೆಲ್ಡನ್ ಕೊಟ್ರೆಲ್, ಕೀಮೊ ಪಾಲ್, ಅಲ್ಝಾರಿ ಜೋಸೆಫ್, ರೋಮಾರಿಯೊ ಶೆಫೋರ್ಡ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News