ಕೊಲೆ ಪ್ರಕರಣದ ವಿಚಾರಣೆ: ಸಾಕ್ಷಿಗಳನ್ನು ದುರುಗುಟ್ಟಿ ನೋಡಿದ 27 ವಿದ್ಯಾರ್ಥಿಗಳ ಬಂಧನ

Update: 2019-10-17 14:31 GMT

ಚೆನ್ನೈ, ಅ.17: ನ್ಯಾಯಾಲಯದಲ್ಲಿ ಕೊಲೆ ಪ್ರಕರಣದ ವಿಚಾರಣೆ ನಡೆಯುತ್ತಿದ್ದಾಗ ಸಾಕ್ಷಿಗಳನ್ನು ದುರುಗುಟ್ಟಿ ನೋಡಿದ ಚೆನ್ನೈ ಕಾಲೇಜಿನ ಕನಿಷ್ಟ 27 ವಿದ್ಯಾರ್ಥಿಗಳನ್ನು ಬಂಧಿಸಿದ ಘಟನೆ ಮಂಗಳವಾರ ನಡೆದಿರುವುದಾಗಿ ವರದಿಯಾಗಿದೆ.

ಕಳೆದ ವರ್ಷ ತಿರುವಲ್ಲೂರಿನಲ್ಲಿ ನಡೆದಿದ್ದ ಇಟ್ಟಿಗೆ ಕಾರ್ಖಾನೆಯೊಂದರ ಮಾಲಕನ ಕೊಲೆ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆದಿದ್ದು ಆರು ಸಾಕ್ಷಿಗಳ ಹೇಳಿಕೆ ದಾಖಲಿಸಿಕೊಳ್ಳಲಾಗುತ್ತಿತ್ತು. ಈ ಸಂದರ್ಭ ನ್ಯಾಯಾಲಯದ ಆವರಣಕ್ಕೆ ಆಗಮಿಸಿದ ಸುಮಾರು 30 ವಿದ್ಯಾರ್ಥಿಗಳ ಗುಂಪೊಂದು ಸಾಕ್ಷಿಗಳನ್ನು ದುರುಗುಟ್ಟಿ ನೋಡಿ ಅವರನ್ನು ಹೆದರಿಸುವ ಪ್ರಯತ್ನ ನಡೆಸಿದೆ ಎಂದು ವರದಿಯಾಗಿದೆ.

ಈ ವಿದ್ಯಾರ್ಥಿಗಳು ಕೊಲೆ ಪ್ರಕರಣದ ಇಬ್ಬರು ಪ್ರಮುಖ ಆರೋಪಿಗಳ ಸೋದರಳಿಯನ ಸಹಪಾಠಿಗಳಾಗಿದ್ದು ಚೆನ್ನೈಯ ನಂದನಮ್ ಸರಕಾರಿ ವಿಜ್ಞಾನ ಮತ್ತು ಕಲಾ ಕಾಲೇಜಿನ ಪ್ರಥಮ ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿಗಳು. ಇವರು ಸಾಕ್ಷಿಗಳನ್ನು ಹೆದರಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು 27 ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ. ತಪ್ಪಿಸಿಕೊಂಡ ವಿದ್ಯಾರ್ಥಿಗಳ ಬಗ್ಗೆ ಮಾಹಿತಿ ಲಭಿಸಿದ್ದು ಶೀಘ್ರ ಬಂಧಿಸಲಾಗುವುದು.

 ವಿದ್ಯಾರ್ಥಿಗಳು ನಟ ಧನುಷ್ ಅವರ ಇತ್ತೀಚಿನ ಸಿನೆಮ ‘ಅಸುರಂ’ನಿಂದ ಪ್ರೇರಣೆ ಪಡೆದಿರಬಹುದು. ಬಂಧಿತ ವಿದ್ಯಾರ್ಥಿಗಳನ್ನು ಚೆನ್ನೈಯ ಸೆಂಟ್ರಲ್ ಜೈಲಿನಲ್ಲಿ ಬಂಧನದಲ್ಲಿಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News