ಡೊನೇಷನ್ ಪಡೆಯುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ತೆರಿಗೆ ವಿಧಿಸಲು ಮುಂದಾದ ಬಿಬಿಎಂಪಿ

Update: 2019-10-17 16:54 GMT

ಬೆಂಗಳೂರು,ಅ.17: ಕೆಎಂಸಿ ಕಾಯ್ದೆ 110ಜಿ ಅಡಿಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ತೆರಿಗೆ ಮತ್ತಿತರ ಸವಲತ್ತುಗಳ ವಿನಾಯಿತಿ ಪಡೆದಿದ್ದರೂ ಲಕ್ಷಾಂತರ ರೂ. ಡೊನೇಷನ್ ಪಡೆಯುತ್ತಿರುವ ನಗರದ ಮೂರು ಸಾವಿರಕ್ಕೂ ಅಧಿಕ ಶಾಲಾ ಕಾಲೇಜುಗಳ ಮಾಹಿತಿ ಸಂಗ್ರಹಿಸಿರುವ ಬಿಬಿಎಂಪಿ ತೆರಿಗೆ ವಿಧಿಸಲು ಮುಂದಾಗಿದೆ.

ಇಂತಹ ಖಾಸಗಿ ಶಾಲಾ- ಕಾಲೇಜುಗಳಿಂದ ತೆರಿಗೆ ಸಂಗ್ರಹ ಮಾಡಲು ಪಾಲಿಕೆ ಅಧಿಕಾರಿಗಳು ಪ್ರಸ್ತಾವನೆಯನ್ನು ಸಿದ್ದಪಡಿಸಿದ್ದು, ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಜೈನ್ ಅವರು ಈ ಪ್ರಸ್ತಾವನೆಯನ್ನು ಕಂದಾಯ ಸಚಿವ ಅಶೋಕ್ ಅವರ ಮುಂದೆ ಸಲ್ಲಿಸಲು ನಿರ್ಧರಿಸಿದ್ದಾರೆ.

  ಸರಕಾರದಿಂದ ತೆರಿಗೆ ವಿನಾಯಿತಿ ಇನ್ನಿತರೆ ಸವಲತ್ತುಗಳನ್ನು ಪಡೆದು ಉಚಿತ ಶಿಕ್ಷಣ ನೀಡುವುದಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳು ಹೇಳಿಕೊಳ್ಳುತ್ತವೆ. ಆದರೆ ಸಾಕಷ್ಟು ಡೊನೇಷನ್ ವಿದ್ಯಾರ್ಥಿಗಳಿಂದ ಪಡೆಯುತ್ತವೆ. ಇಂತಹ ಶಿಕ್ಷಣ ಸಂಸ್ಥೆಗಳಿಗೆ ತೆರಿಗೆ ವಿಧಿಸುವುದು ಸೂಕ್ತ ಎಂಬುದು ಬಿಬಿಎಂಪಿಯ ಲೆಕ್ಕಾಚಾರವಾಗಿದ್ದು, ಸರಕಾರ ಈ ಪ್ರಸ್ತಾವನೆಗೆ ಸಮ್ಮತಿ ಸೂಚಿಸಿದರೆ ಪಾಲಿಕೆ ಬೊಕ್ಕಸಕ್ಕೆ ಕೋಟಿ ಕೋಟಿ ಆದಾಯ ಹರಿದು ಬರಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News