ಪಾಕಿಸ್ತಾನದ ಟೆಸ್ಟ್ ನಾಯಕನಾಗಿ ಅಝರ್ ಅಲಿ ಆಯ್ಕೆ ಸಾಧ್ಯತೆ

Update: 2019-10-18 05:04 GMT

ಲಾಹೋರ್, ಅ.17: ಪಾಕಿಸ್ತಾನದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಅಝರ್ ಅಲಿ ಅವರು ಸರ್ಫರಾಝ್ ಅಹ್ಮದ್ ಬದಲಿಗೆ ಟೆಸ್ಟ್ ಕ್ರಿಕೆಟ್ ಪಂದ್ಯದ ನಾಯಕನಾಗಿ ಆಯ್ಕೆಯಾಗುವ ಸಾಧ್ಯತೆಯಿದೆ. ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಮುಹಮ್ಮದ್ ರಿಝ್ವ್‌ನ್ ಉಪ ನಾಯಕನಾಗಿ ಆಯ್ಕೆಯಾಗುವ ಸಂಭವವಿದೆ.

  ಸರ್ಫರಾಝ್ ಪ್ರದರ್ಶನದಿಂದ ಅಸಮಾಧಾನಗೊಂಡಿರುವ ಮುಖ್ಯ ಕೋಚ್ ಮಿಸ್ಬಾವುಲ್ ಹಕ್ ಈ ಕುರಿತು ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ)ಮುಖ್ಯ ಕಾರ್ಯಾಧಿಕಾರಿ ವಸೀಂ ಖಾನ್‌ಗೆ ವರದಿ ಸಲ್ಲಿಸಿದ್ದಾರೆ.

 ಸರ್ಫರಾಝ್ ಪಾಕ್ ತಂಡ ನಾಯಕನಾಗಿ ಮುಂದುವರಿಯಬಾರದು ಎಂದು ಮಿಸ್ಬಾ ಸ್ಪಷ್ಟಪಡಿಸಿದ್ದಾರೆ. ಆದರೆ, ಮುಂಬರುವ ಆಸ್ಟ್ರೇಲಿಯ ವಿರುದ್ಧ ಕಠಿಣ ಪ್ರವಾಸಕ್ಕೆ ಮೊದಲು ಪಿಸಿಬಿ ನಾಯಕನನ್ನು ಬದಲಾಯಿಸುವ ಆತುರದಲ್ಲಿಲ್ಲ. ಆಲ್‌ರೌಂಡರ್ ಮುಹಮ್ಮದ್ ಹಫೀಝ್ ಎಲ್ಲ ಮಾದರಿ ಕ್ರಿಕೆಟ್‌ನಲ್ಲಿ ಪಾಕ್ ತಂಡವನ್ನು ಮುನ್ನಡೆಸುವ ಆಟಗಾರರ ಪೈಕಿ ಮುಂಚೂಣಿಯಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News