ಪೆಹ್ಲೂ ಖಾನ್ ಪ್ರಕರಣ: ಆರೋಪಿಗಳ ಖುಲಾಸೆ ಪ್ರಶ್ನಿಸಿ ಹೈಕೋರ್ಟಿಗೆ ಅಪೀಲು ಸಲ್ಲಿಸಿದ ರಾಜಸ್ಥಾನ ಸರಕಾರ

Update: 2019-10-18 12:38 GMT

ಜೈಪುರ್, ಅ.18: ಪೆಹ್ಲೂ ಖಾನ್ ಗುಂಪು ಹತ್ಯೆ ಪ್ರಕರಣದಲ್ಲಿನ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿದ ಆಲ್ವಾರ್ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ಆದೇಶದ ವಿರುದ್ಧ ರಾಜಸ್ಥಾನ ಸರಕಾರ ಹೈಕೋರ್ಟಿಗೆ ಅಪೀಲು ಸಲ್ಲಿಸಿದೆ.

ಎಪ್ರಿಲ್ 1, 2017ರಂದು ಜೈಪುರ್ ನ ಮಾರುಕಟ್ಟೆಯೊಂದರಿಂದ ಹರ್ಯಾಣದ ನುಹ್ ಎಂಬಲ್ಲಿನ ತನ್ನ ಮನೆಗೆ ದನಗಳನ್ನು ಸಾಗಿಸುತ್ತಿದ್ದ ವೇಳೆ ಪೆಹ್ಲೂ ಖಾನ್ ರನ್ನು ಗುಂಪೊಂದು ಥಳಿಸಿ ಕೊಂದಿತ್ತು. ಪೆಹ್ಲೂ ಖಾನ್ ಸಾವನ್ನಪ್ಪುವ ಮುನ್ನ ನೀಡಿದ್ದ ಹೇಳಿಕೆಯಲ್ಲಿ ಆರು ಮಂದಿ ಆರೋಪಿಗಳ ಹೆಸರುಗಳನ್ನು ಉಲ್ಲೇಖಿಸಲಾಗಿತ್ತು. ಆದರೆ ಎಲ್ಲಾ ಆರು ಮಂದಿಯನ್ನು ಆಗಸ್ಟ್ 14ರ ತೀರ್ಪಿನಲ್ಲಿ ಆಲ್ವಾರ್ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು ಖುಲಾಸೆಗೊಳಿಸಿದ್ದರು.

ರಾಜಸ್ಥಾನ ಸರಕಾರ ತನ್ನ ಅಪೀಲನ್ನು ಅಕ್ಟೋಬರ್ 14ರಂದು ಸಲ್ಲಿಸಿದ್ದರೆ ಪೆಹ್ಲೂ ಖಾನ್ ಕುಟುಂಬ ಕೂಡ ಕೆಳಗಿನ ಹಂತದ ನ್ಯಾಯಾಲಯದ ತೀರ್ಪಿನ ವಿರುದ್ಧ ಅಕ್ಟೋಬರ್ 3ರಂದು ಅಪೀಲು ಸಲ್ಲಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News