ಮೂರನೇ ಟೆಸ್ಟ್: ರೋಹಿತ್ ಆರನೇ ಶತಕ

Update: 2019-10-19 09:22 GMT

ರಾಂಚಿ, ಆ.19: ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಶ್ರೇಷ್ಠ ಪ್ರದರ್ಶನ ಮುಂದುವರಿಸಿದ ರೋಹಿತ್ ಶರ್ಮಾ ಮೂರನೇ ಹಾಗೂ ಅಂತಿಮ ಟೆಸ್ಟ್‌ನ ಮೊದಲ ದಿನವಾದ ಶನಿವಾರ ವೃತ್ತಿಜೀವನದ ಆರನೇ ಶತಕ ಸಿಡಿಸಿದರು.

ದಕ್ಷಿಣ ಆಫ್ರಿಕಾದ ಬೌಲರ್ ಪೀಟ್ ಎಸೆತವನ್ನು ಸಿಕ್ಸರ್‌ಗೆ ಅಟ್ಟಿದ ರೋಹಿತ್ 130 ಎಸೆತಗಳಲ್ಲಿ 13 ಬೌಂಡರಿ ಹಾಗೂ 4 ಸಿಕ್ಸರ್‌ಗಳ ಸಹಾಯದಿಂದ ಶತಕ ಪೂರೈಸಿದರು.

ಇದೇ ವೇಳೆ ರೋಹಿತ್ ಟೆಸ್ಟ್‌ನಲ್ಲಿ 2,000 ರನ್ ಪೂರ್ಣಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News