ಶಾಲಾ ಮಕ್ಕಳಿಗೆ ತರಗತಿಯಾದ ಹಳೆಯ ಬಸ್ !
ಇಟಾನಗರ್, ಅ. 20: ಶಾಲಾ ಕಟ್ಟಡದಲ್ಲಿ ಸ್ಥಳಾವಕಾಶದ ಕೊರತೆಗೆ ಅರುಣಾಚಲ ಪ್ರದೇಶದ ಜಿಲ್ಲೆಯೊಂದು ನವೀನ ಆವಿಷ್ಕಾರವೊಂದನ್ನು ಪತ್ತೆ ಹಚ್ಚಿದೆ. ಇದೇ ಸಂದರ್ಭ ಮೋಜಿನ ಕಲಿಕೆಯನ್ನು ಉತ್ತೇಜಿಸಿದೆ.
ಲೋಹಿತ ಜಿಲ್ಲೆಯ ಆಡಳಿತ ಟೇಬಲ್, ಕುರ್ಚಿ ಹಾಗೂ ಪಾಠೋಪಕರಣಗಳನ್ನು ಒಳಗೊಂಡಂತೆ ಹಳೆಯ ಬಸ್ಸೊಂದನ್ನು ತರಗತಿ ಕೊಠಡಿಯಾಗಿ ಪರಿವರ್ತಿಸಿದೆ.
ತರಗತಿ ಕೊಠಡಿಯಲ್ಲಿ ಕಿರಿಯ ವಿದ್ಯಾರ್ಥಿಗಳು ಹಿರಿಯ ವಿದ್ಯಾರ್ಥಿಗಳೊಂದಿಗೆ ಕುಳಿತುಕೊಳ್ಳುವುದರಿಂದ ಸ್ಥಳಾವಕಾಶದ ಕೊರತೆ ಕಿರಿಯ ವಿದ್ಯಾರ್ಥಿಗಳು ಶಾಲೆ ಬಿಡಲು ಪ್ರಮುಖ ಕಾರಣವಾಗುತ್ತಿದೆ ಎಂದು ಜಿಲ್ಲಾ ಅಧಿಕಾರಿ ತಿಳಿಸಿದ್ದಾರೆ.
ಜಿಲ್ಲೆಯ ಥೊವಾಂಗ್ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಂದ ‘ಶಾಲೆಯಲ್ಲಿ ಬಸ್’ ಚಿಂತನೆ ಸ್ವೀಕರಿಸಲಾಯಿತು. ತರಗತಿಗೆ ಹಾಜರಾಗುವುದಕ್ಕೆ ಬದಲಾಗಿ ಈ ಬಸ್ ತರಗತಿಗೆ ಹಾಜರಾಗಲು ಮಕ್ಕಳು ಉತ್ಸುಕರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಇದು ಸ್ಥಳಾವಕಾಶದ ಕೊರತೆಯ ಸಮಸ್ಯೆಯನ್ನು ಮಾತ್ರ ಪರಿಹರಿಸಿಲ್ಲ. ಬದಲಾಗಿ ಕಲಿಕೆಯನ್ನು ಮೋಜು ಹಾಗೂ ಸಂವಹನದ ಮೂಲಕ ನಡೆಸಲು ಅನುವು ಮಾಡಿಕೊಟ್ಟಿದೆ ಎಂದು ಲೋಹಿತ್ ಉಪ ಅಧೀಕ್ಷಕ ಪ್ರಿನ್ಸ್ ಧವನ್ ಹೇಳಿದ್ದಾರೆ.
ಬಸ್‌ನ ಒಳಗೆ ಭಾರತದ ರಾಜಕೀಯ ಭೂಪಟ, ರಾಷ್ಟ್ರೀಯ ಪ್ರಾಣಿ, ಮಾನವನ ದೇಹ ರಚನೆಯನ್ನು ಪೈಂಟ್ ಮಾಡಲಾಗಿದೆ. ಕರಿಹಲಗೆ, ಟೇಬಲ್, ಚಯರ್ ಹಾಗೂ ಪಾಠೋಪಕರಣಗಳನ್ನು ವ್ಯವಸ್ಥೆಗೊಳಿಸಲಾಗಿದೆ ಎಂದು ಧವನ್ ಹೇಳಿದ್ದಾರೆ.