ಒಂದಿಷ್ಟಾದರೂ ಆತ್ಮಸಾಕ್ಷಿ ಇರಬೇಕು: ಜೈರಾಂ ರಮೇಶ್

Update: 2019-10-20 17:52 GMT

ಹೊಸದಿಲ್ಲಿ, ಅ.20: ಮಾಜಿ ಸಿವಿಸಿ ಕೆವಿ ಚೌಧರಿ ರಿಲಯನ್ಸ್ ಆಡಳಿತ ಮಂಡಳಿಗೆ ನೇಮಕವಾಗಿವುದು ದುರದೃಷ್ಟಕರ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಜೈರಾಂ ರಮೇಶ್ ಪ್ರತಿಕ್ರಿಯಿಸಿದ್ದು , ಸ್ವಲ್ಪವಾದರೂ ಆತ್ಮಸಾಕ್ಷಿ ಇರಬೇಕು ಎಂದಿದ್ದಾರೆ.

ಸಮಗ್ರತೆಯ ಪಾಲಕರಾಗಿ ನೇಮಕವಾಗುವ ಜನರು ಸಾರ್ವಜನಿಕವಾಗಿ ಗೌರವಯುತವಾಗಿ ನಡೆದುಕೊಳ್ಳಬೇಕು. ಕೆವಿ ಚೌಧರಿಯ ನೇಮಕ ಅನಪೇಕ್ಷಿತ ಮತ್ತು ದುರದೃಷ್ಟಕರ. ಖಂಡಿತವಾಗಿಯೂ ಒಂದಿಷ್ಟಾದರೂ ಆತ್ಮಸಾಕ್ಷಿ ಇರಬೇಕು ಎಂದು ಜೈರಾಂ ರಮೇಶ್ ಟ್ವೀಟ್ ಮಾಡಿದ್ದಾರೆ.

ಸ್ಟಾಕ್‌ಎಕ್ಸ್‌ಚೇಂಜ್ 2018ರ ಜೂನ್ 20ರಂದು ಜಾರಿಗೊಳಿಸಿದ ಸುತ್ತೋಲೆಯಂತೆ ಕೇಂದ್ರ ಜಾಗೃತಿ ಆಯೋಗ(ಸಿವಿಸಿ)ದ ಮಾಜಿ ಆಯುಕ್ತ ಕೆವಿ ಚೌಧರಿಯನ್ನು ರಿಲಯನ್ಸ್ ಇಂಡಸ್ಟ್ರೀಸ್‌ನ ಕಾರ್ಯನಿರ್ವಾಹಕರಲ್ಲದ ಹೆಚ್ಚುವರಿ ನಿರ್ದೇಶಕರನ್ನಾಗಿ ನೇಮಿಸಲಾಗಿದೆ ಎಂದು ಮುಕೇಶ್ ಅಂಬಾನಿ ಮಾಲಕತ್ವದ ಸಂಸ್ಥೆ ಶನಿವಾರ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News