ವಿಮಾನದ ಬಾಗಿಲು ತೆರೆಯಲು ಯತ್ನಿಸಿದ ಪಾನಮತ್ತ ವ್ಯಕ್ತಿ: ಸಹ ಪ್ರಯಾಣಿಕರು ಮಾಡಿದ್ದೇನು ಗೊತ್ತಾ?

Update: 2019-10-21 10:07 GMT

ಹೊಸದಿಲ್ಲಿ, ಅ.21: ಫುಕೆಟ್‍ ಗೆ ಹೊರಟಿದ್ದ ವಿಮಾನದಲ್ಲಿ ಮೂವರು ಪ್ರಯಾಣಿಕರು ಪುಂಡಾಟಿಕೆ ಎಸಗಿದ ಘಟನೆ ಬೆಳಕಿಗೆ ಬಂದಿದೆ. ಒಂದು ಘಟನೆಯಲ್ಲಿ ಪಾನಮತ್ತ ಪ್ರಯಾಣಿಕನೊಬ್ಬ ವಿಮಾನದ ಬಾಗಿಲು ತೆರೆಯಲು ಯತ್ನಿಸಿದರೆ, ಮತ್ತೊಂದು ಘಟನೆಯಲ್ಲಿ ಪಾನಮತ್ತ ಪ್ರಯಾಣಿಕ ಗದ್ದಲ ಎಬ್ಬಿಸಿದ್ದಾನೆ. ಇನ್ನೊಂದು ಪ್ರಕರಣದಲ್ಲಿ ವ್ಯಕ್ತಿಯೊಬ್ಬ ಶೌಚಾಲಯದಲ್ಲಿ ಧೂಮಪಾನ ಮಾಡುತ್ತಿದ್ದ.

ವಿಮಾನ 33 ಸಾವಿರ ಅಡಿ ಎತ್ತರದಲ್ಲಿ ಹಾರಾಡುತ್ತಿದ್ದಾಗ ಪಾನಮತ್ತ ಪ್ರಯಾಣಿಕನೊಬ್ಬ ವಿಮಾನದ ಬಾಗಿಲು ತೆರೆಯುವ ಯತ್ನ ಮಾಡಿದ್ದಾನೆ. ಈ ಘಟನೆ ಕುರಿತ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೊ ದೃಶ್ಯಾವಳಿಯಲ್ಲಿ ಕಂಡುಬರುವಂತೆ ವಿಮಾನದ ಕ್ಯಾಪ್ಟನ್, ಸೀಟ್ ಬೆಲ್ಟ್‍ ಗಳನ್ನು ಕಟ್ಟಿಕೊಳ್ಳುವಂತೆ ಪ್ರಯಾಣಿಕರಿಗೆ ಸೂಚನೆ ನೀಡಿದ್ದಾರೆ. ವಿಮಾನದ ಹಿಂದಿನ ಆಸನದಲ್ಲಿರುವ ಪ್ರಯಾಣಿಕನೊಬ್ಬ ಪಾನಮತ್ತನಾಗಿ ವಿಮಾನದ ಮುಖ್ಯ ಬಾಗಿಲನ್ನು ತೆರೆಯುವ ಯತ್ನ ಮಾಡುತ್ತಿದ್ದಾನೆ ಎಂದು ವಿವರಿಸುತ್ತಿದ್ದಾರೆ.

ವಿಮಾನದ ವೈದ್ಯ ಆತನನ್ನು ಸಮಾಧಾನಪಡಿಸಲು ಯತ್ನಿಸುತ್ತಿದ್ದರೆ, ಸಹಪ್ರಯಾಣಿಕರು ಮತ್ತು ಕ್ಯಾಬಿನ್ ಸಿಬ್ಬಂದಿ, ಪ್ಲಾಸ್ಟಿಕ್‍ ನಿಂದ ಆತನನ್ನು ಕಟ್ಟಿಹಾಕಿದ್ದಾರೆ. ಆದರೆ ಅದರಲ್ಲಿ ಸಫಲರಾಗದೇ ಉಜ್ಬೇಕಿಸ್ತಾನದಲ್ಲಿ ವಿಮಾನ ತುರ್ತು ಭೂಸ್ಪರ್ಶ ಮಾಡಬೇಕಾಯಿತು. ಪ್ರಯಾಣಿಕನನ್ನು ಬಂಧಿಸಲಾಗಿದೆ.

ವಿಮಾನ ಟೇಕಾಫ್ ಆದ ಬಳಿಕ ಮತ್ತಿಬ್ಬರು ಪಾನಮತ್ತ ಪ್ರಯಾಣಿಕರು ಕೂಡಾ ದಾಂಧಲೆ ನಡೆಸಲು ಯತ್ನಿಸಿದಾಗ ಸಿಬ್ಬಂದಿ ತಡೆದರು. ಸ್ವಲ್ಪ ಸಮಯದ ಬಳಿಕ ಮತ್ತೊಬ್ಬ ಪ್ರಯಾಣಿಕನನ್ನು ಶೌಚಾಲಯದಲ್ಲಿ ಧೂಮಪಾನ ಮಾಡುತ್ತಿದ್ದ ಆರೋಪದ ಮೇಲೆ ಬಂಧಿಸಲಾಯಿತು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News